AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Murali: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಸಿಂಹ ಗರ್ಜನೆ ತೋರಿಸಿದ ಪುಟಾಣಿ ಪೋರ!

Sri Murali: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಸಿಂಹ ಗರ್ಜನೆ ತೋರಿಸಿದ ಪುಟಾಣಿ ಪೋರ!

TV9 Web
| Updated By: shivaprasad.hs|

Updated on: Aug 17, 2021 | 12:48 PM

Share

Madagaja: ನಟ ಶ್ರೀಮುರಳಿ ಮದಗಜ ಚಿತ್ರದ ಶೂಟಿಂಗ್ ಸಮಯದಲ್ಲಿ ಚಿತ್ರೀಕರಣ ನೋಡಲು ಬಂದ ಮಗುವಿನೊಂದಿಗೆ ಖುಷಿಯಿಂದ ಸಮಯ ಕಳೆದಿದ್ದು, ಮುದ್ದಾದ ಈ ವಿಡಿಯೊ ಈಗ ಎಲ್ಲರ ಮನಗೆದ್ದಿದೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.

ಬಹು ನಿರೀಕ್ಷೆಯ ‘ಮದಗಜ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ, ಚಿತ್ರೀಕರಣ ನೋಡಲು ಬಂದ ಮಗುವಿನ ಜೊತೆಗೆ ಸಮಯ ಕಳೆದ ಮುದ್ದಾದ ವಿಡಿಯೊ ಎಲ್ಲರ ಗಮನ ಸೆಳೆದಿದೆ. ಆ ಸಂದರ್ಭದಲ್ಲಿ ಮಗುವಿನ ಜೊತೆಗೆ ಆಟವಾಡುತ್ತಾ, ತಮಾಷೆ ಮಾಡಿದ ಉಗ್ರಂ ನಟ, ತಾವು ಮಕ್ಕಳನ್ನು ಬೆಳೆಸಿದ ಕುರಿತೂ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಮಗಳನ್ನು ಸುಮಾರು ಆರು ತಿಂಗಳಾಗುವವರೆಗೂ ಅವರು ಯಾರಿಗೂ ಮುಟ್ಟುವುದಕ್ಕೆ ಬಿಡುತ್ತಲೇ ಇರಲಿಲ್ಲವಂತೆ. ಒಂದು ಫೊಟೊವನ್ನೂ ತೆಗೆಯುವುದಕ್ಕೆ ಬಿಡುತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ‘ಭರಾಟೆ’ ಸಿನಿಮಾದ ಬಳಿಕ ಶ್ರೀಮರಳಿ ನಟಿಸುತ್ತಿರುವ ‘ಮದಗಜ’ ಚಿತ್ರ ಕೂಡ ಪಕ್ಕಾ ಮಾಸ್​ ಶೈಲಿಯಲ್ಲಿ ಮೂಡಿಬರುತ್ತಿದೆ. ‘ಅಯೋಗ್ಯ’ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡ ಮಹೇಶ್​ ಈಗ ‘ಮದಗಜ’ಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಭಾರಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಅಭಿನಯಿಸುತ್ತಿದ್ದು, ಉಮಾಪತಿ ಶ್ರೀನಿವಾಸ ಗೌಡ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ

Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?

(Roaring Star Sri Murali spends time with a kid in Shooting Spot and fans loved his kind gesture)