ಬೆಂಗಳೂರಿನ ಸಿಂಪಲ್ ಎನರ್ಜಿ ಕಂಪನಿಯೂ ತನ್ನ ಸಿಂಪಲ್ ವನ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ
ಸಿಂಪಲ್ ವನ್ ಸ್ಕೂಟರ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಬ್ಯಾಟರಿಯನ್ನು ಅರ್ಧದಷ್ಟು ಚಾರ್ಜ್ ಮಾಡಿ 75 ಕಿಮೀ ದೂರವನ್ನು ಕ್ರಮಿಸಬಹುದಂತೆ, ಹಾಗೆಯೇ ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 226 ಕಿಮೀ ಸಾಗಬಹುದು.
ಎಲೆಕ್ಟಿಕ್ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಬಗ್ಗೆ ನಾವು ಪ್ರತಿದಿನ ಚರ್ಚೆ ಮಾಡ್ತಾ ಇದ್ದೀವಿ. ಬೇರೆ ದಾರೀಯೇ ಇಲ್ಲ ಮಾರಾಯ್ರೇ. ಯಾಕೆ ಗೊತ್ತುಂಟಾ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿರುವ ಕಂಪನಿಗಳು ಸ್ವಾತಂತ್ರ್ಯೋತ್ಸವದ ದಿನಕ್ಕಾಗಿ ಕಾಯಗುತ್ತಿದ್ದವು ಅಂತ ಕಾಣುತ್ತೆ. ಅವತ್ತೇ ಹಲವಾರು ಇಲೆಕ್ಟ್ರಿಕ್ ವಾಹನಗಳು ಲಾಂಚ್ ಆಗಿವೆ. ಈ ಲಿಸ್ಟ್ಗೆ ಲೇಟೆಸ್ಟ್ ಎಂಟ್ರಿ ಎಂದರೆ ಸಿಂಪಲ್ ವನ್ ಇಲೆಕ್ಟ್ರಿಕ್ ಸ್ಕೂಟರ್. ನಾವು ಹೆಮ್ಮೆ ಪಟ್ಟುಕೊಳ್ಳಬಹುದಾದ ಒಂದು ಅಂಶ ಸಿಂಪಲ್ ವನ್ ಸ್ಕೂಟರ್ನೊಂದಿಗೆ ಬೆಸೆದುಕೊಂಡಿದೆ. ಅದೇನು ಗೊತ್ತಾ? ಇದನ್ನು ತಯಾರಿಸುವ ಸಿಂಪಲ್ ಎನರ್ಜಿ ಕಂಪನಿ ನಮ್ಮ ಬೆಂಗಳೂರಿನದು. ಆದರೆ ಉತ್ಪಾದನಾ ಘಟಕ ಮಾತ್ರ ತಮಿಳುನಾಡಿನಲ್ಲಿದೆ ಮತ್ತು ಈ ಪ್ಲ್ಯಾಂಟ್ ವರ್ಷಕ್ಕೆ ಹತ್ತು ಲಕ್ಷ ಸ್ಕೂಟರ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಸಿಂಪಲ್ ವನ್ ಇ ಸ್ಕೂಟರ್ ಮೊದಲ ಹಂತದಲ್ಲಿ 13 ರಾಜ್ಯಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸ್ಕೂಟರ್ ಲಭ್ಯವಾಗಲಿದೆ. ಗ್ರಾಹಕರಿಂದ ರೂ. 1,947 ಮುಂಗಡ ಹಣವನ್ನು ಕಟ್ಟಿಸಿಕೊಂಡಿದ್ದ ಕಂಪನಿಯು ಇಷ್ಟರಲ್ಲೇ ಡೆಲಿವರಿ ಶುರು ಮಾಡಲಿದೆ.
ಸಿಂಪಲ್ ವನ್ ಸ್ಕೂಟರ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಬ್ಯಾಟರಿಯನ್ನು ಅರ್ಧದಷ್ಟು ಚಾರ್ಜ್ ಮಾಡಿ 75 ಕಿಮೀ ದೂರವನ್ನು ಕ್ರಮಿಸಬಹುದಂತೆ, ಹಾಗೆಯೇ ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 226 ಕಿಮೀ ಸಾಗಬಹುದು. ಸಿಂಪಲ್ ವನ್ ಗಾಡಿಯ ಗರಿಷ್ಟ ವೇಗ ಮಿತಿ 105 ಕಿಮೀ/ ಗಂಟೆ. ಸ್ಟಾರ್ಟ್ ಮಾಡಿದ ಕೇವಲ 2.95 ಸೆಕೆಂಡ್ಗಳಲ್ಲಿ 40 ಕಿಮೀ ವೇಗವನ್ನು ಪಡೆದುಕೊಳ್ಳುವ ಸಿಂಪಲ್ ವನ್ ಸ್ಕೂಟರ್ನ ಎಕ್ಸ್ ಶೋರೂಮ್ ಬೆಲೆ ರೂ. 1.10 ಲಕ್ಷ.
ಇದನ್ನೂ ಓದಿ: Viral Video: ಬೆಂಗಳೂರಿನ ಚಿಂದಿ ಆಯುವ ಮಹಿಳೆಯ ಇಂಗ್ಲೀಷ್ ಕೇಳಿ ಜನರೆಲ್ಲಾ ಫಿದಾ; ನೀವು ವಿಡಿಯೋ ಮಿಸ್ ಮಾಡ್ಕೊಳೋ ಹಾಗಿಲ್ಲ