ಸಂಚಿತ್ ಸಂಜೀವ್ ಮೊದಲ ಸಿನಿಮಾ ಏನಾಯ್ತು? ಉತ್ತರಿಸಿದ ಸುದೀಪ್ ಅಳಿಯ
ಸುದೀಪ್ ಅಳಿಯ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಹಾಗಾದರೆ, ಅವರ ಮೊದಲ ಸಿನಿಮಾದ ಕಥೆ ಏನಾಯಿತು? ಈ ಪ್ರಶ್ನೆಗೆ ಸಂಚಿತ್ ಸಂಜೀವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ಸಿನಿಮಾ ಯಾವ ಹಂತದಲ್ಲಿ ಇದೆ ಎಂಬುದನ್ನು ತಿಳಿಸಿದ್ದಾರೆ.
ಸಂಚಿತ್ ಸಂಜೀವ್ ಅವರು ‘ಜಿಮ್ಮಿ’ ಹೆಸರಿನ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಕೂಡ ಇತ್ತು. ಅದಕ್ಕೂ ಮೊದಲೇ ‘ಮ್ಯಾಂಗೋ ಪಚ್ಚ’ ಹೆಸರಿನ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಶೂಟ್ ಫೆಬ್ರವರಿ 10ರಿಂದ ಆರಂಭ ಆಗಲಿದೆ. ಹಾಗಾದರೆ, ‘ಜಿಮ್ಮಿ’ ಸಿನಿಮಾ ಕಥೆ ಏನಾಯ್ತು? ಈ ಬಗ್ಗೆ ಸಂಚಿತ್ ಮಾತನಾಡಿದ್ದಾರೆ. ‘ಮೊದಲ ಸಿನಿಮಾ ಮ್ಯಾಂಗೋ ಪಚ್ಚ ಆಗಲಿದೆ. ಜಿಮ್ಮಿ ಸಿನಿಮಾ ಮಾಡೇ ಮಾಡುತ್ತೇವೆ. ಎರಡು ಅಥವಾ ಮೂರನೇ ಸಿನಿಮಾ ಆಗಿ ಜಿಮ್ಮಿ ಬರಲಿದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

