ಮಳವಳ್ಳಿ ಬಾಲಕಿಯ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಭೇಟಿ, ಒಟ್ಟಿಗೆ ಹೋರಾಡೋಣ ಅಂತ ಕುಟುಂಬಕ್ಕೆ ಭರವಸೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2022 | 1:07 PM

ಸಂತ್ರಸ್ತೆಯ ಅಜ್ಜಿ ಮೊಮ್ಮಗಳ ಬಗ್ಗೆ ಮಾತಾಡುವಾಗ ಹರ್ಷಿಕಾ ಮತ್ತು ಭುವನ್ ಇಬ್ಬರಿಗೂ ದುಃಖ ಉಮ್ಮಳಿಸಿ ಬಂತು. ನಿಮ್ಮೊಂದಿಗೆ ನಾವಿದ್ದೇವೆ, ಎಲ್ಲರೂ ಸೇರಿ ಹೋರಾಟ ನಡೆಸೋಣ ಅಂತ ಕುಟುಂಬಕ್ಕೆ ಹರ್ಷಿಕಾ ಭರವಸೆ ನೀಡಿದರು.

ಮಂಡ್ಯ: ಮಳವಳ್ಳಿಯ ನತದೃಷ್ಟ ಬಾಲಕಿಯ (Malavalli Girl) ಮನೆಗೆ ಗಣ್ಯರು ಮತ್ತು ಸೆಲಿಬ್ರಿಟಿಗಳು ಭೇಟಿ ನೀಡಿ ಅವಳ ತಂದೆ-ತಾಯಿ, ಅಜ್ಜಿ ಮತ್ತು ಕುಟುಂಬದ ಇತರ ಸದಸ್ಯರನ್ನು ಸಂತೈಸುವುದು ಮುಂದುವರಿದಿದೆ. ಸ್ಯಾಂಡಲ್ ವುಡ್ ಖ್ಯಾತ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಅವರ ಕಸಿನ್ ಭುವನ್ ಪೊನ್ನಣ್ಣ (Bhuvan Ponnanna) ಅವರು ಶನಿವಾರ ಬೆಳಗ್ಗೆ ಶೋಕಗ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ಸದಸ್ಯರ ಗೋಳನ್ನು ಆಲಿಸಿದರು. ಸಂತ್ರಸ್ತೆಯ ಅಜ್ಜಿ ಮೊಮ್ಮಗಳ ಬಗ್ಗೆ ಮಾತಾಡುವಾಗ ಹರ್ಷಿಕಾ ಮತ್ತು ಭುವನ್ ಇಬ್ಬರಿಗೂ ದುಃಖ ಉಮ್ಮಳಿಸಿ ಬಂತು. ನಿಮ್ಮೊಂದಿಗೆ ನಾವಿದ್ದೇವೆ, ಎಲ್ಲರೂ ಸೇರಿ ಹೋರಾಟ ನಡೆಸೋಣ ಅಂತ ಕುಟುಂಬಕ್ಕೆ ಹರ್ಷಿಕಾ ಭರವಸೆ ನೀಡಿದರು.