ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅನ್ನು ಭೇಟಿ ಆಗಲು ‘ಒಲವೆ ಮಂದಾರ’ ಸೇರಿದಂತೆ ಇತರೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ಶ್ರೀಕಿ ಆಗಮಿಸಿದ್ದರು. ಆದರೆ ಅವರಿಗೆ ದರ್ಶನ್ ಭೇಟಿಗೆ ಅವಕಾಶ ಸಿಗಲಿಲ್ಲ ಎನ್ನಲಾಗುತ್ತಿದೆ.
‘ಒಲವೆ ಮಂದಾರ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ಶ್ರೀಕಿ ಇಂದು (ಜುಲೈ 18) ನಟ ದರ್ಶನ್ ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಆದರೆ ಅವರಿಗೆ ದರ್ಶನ್ ಭೇಟಿಗೆ ಅವಕಾಶ ಸಿಗಲಿಲ್ಲ ಎನ್ನಲಾಗುತ್ತಿದೆ. ಪರಪ್ಪನ ಅಗ್ರಹಾರದಿಂದ ಹೊರಬಂದ ಬಳಿಕ ಮಾಧ್ಯಮಗಳ ಬಳಿ ಮಾತನಾಡಲು ನಿರಾಕರಿಸಿ ಶ್ರೀಕಿ ತೆರಳಿದರು. ‘ಪ್ರಕರಣ ನ್ಯಾಯಾಲಯದಲ್ಲಿದೆ, ಮುಂದೆ ಮಾತನಾಡುತ್ತೇನೆ’ ಎನ್ನುತ್ತಾ ತೆರಳಿದರು. ನಟ ದರ್ಶನ್ ಅವರು, ಶ್ರೀಕಿಯನ್ನು ಭೇಟಿ ಆಗಿಲ್ಲ ಎನ್ನಲಾಗುತ್ತಿದೆ. ದರ್ಶನ್ ಅವರು ಕುಟುಂಬದವರನ್ನು ಬಿಟ್ಟು ಕೆಲವರನ್ನಷ್ಟೆ ಜೈಲಿನಲ್ಲಿ ಭೇಟಿಯಾಗಿದ್ದಾರೆ. ರಕ್ಷಿತಾ-ಪ್ರೇಮ್, ಧನ್ವೀರ್ ಹಾಗೂ ಅವರ ಆಪ್ತ ಗೆಳೆಯ ಕಾಡು ಶಿವ ಅವರನ್ನು ಮಾತ್ರವೇ ಅವರು ಭೇಟಿ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 18, 2024 04:29 PM
Latest Videos