ಲಂಚ್ ವಿರಾಮಕ್ಕೆ ಮೊದಲು ರೌದ್ರಾವತಾರ ತಳೆದಿದ್ದ ಸಿದ್ದರಾಮಯ್ಯ ಊಟದ ನಂತರ ಸಂತನಂತೆ ಮಾತಾಡಿದರು!
ಸಿದ್ದರಾಮಯ್ಯ ಹಿರಿಯ ಮತ್ತು ಅನುಭವಿ ನಾಯಕ. ದಶಕಗಳಿಂದ ವಿಧಾನಮಂಡಲದ ಕಾರ್ಯಕಲಾಪಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ಮಾತುಗಳಲ್ಲಿ ಅಶ್ವಥ್ ನಾರಾಯಣರನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು ಪ್ರತಿಯೊಂದು ವಿಷಯಕ್ಕೂ ಅವರು ಎದ್ದುನಿಂತು ಮಾತಾಡುತ್ತಾರೆ, ಇದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಉಗ್ರಾವತಾರ ತಳೆಯಬಲ್ಲರು ಮತ್ತು ಸಂತನ ಹಾಗೆ ವಿರೋಧ ಪಕ್ಷದ ನಾಯಕರಿಗೆ ಬುದ್ಧಿವಾದವನ್ನೂ ಹೇಳಬಲ್ಲರು. ಇಂದು ಬಿಜೆಪಿ ನಾಯಕ ಜೊತೆ ಭ್ರಷ್ಟಾಚಾರದ ಮೇಲೆ ಕಾವೇರಿದ ಚರ್ಚೆ ಮತ್ತು ಮಧ್ಯಾಹ್ನದ ಊಟದ ಬಳಿಕ ಸದನ ಪ್ರಶಾಂತವಾಗಿದ್ದಾಗ ಶಾಂತಚಿತ್ತರಾಗಿ ಮಾತಾಡಲು ಎದ್ದು ನಿಂತ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು ಯಾವುದೇ ವಿಷಯವನ್ನು ಚರ್ಚೆಗೆ ಪ್ರಸ್ತಾಪಿದರೂ ಒಬ್ಬೊಬ್ಬರಾಗಿ ಮಾತಾಡಿದರೆ ಸದನದ ಕಾರ್ಯಕಲಾಪಗಳು ಸಾಂಗವಾಗಿ ನಡೆಯುತ್ತವೆ. ಹಾಗೆಯೇ, ಮಂತ್ರಿಗಳು ಕೇಳಿದ ಪ್ರಶ್ನೆಗೆ ಉತ್ತರ ಹೇಳುವಾಗ ಅಡ್ಡಿಪಡಿಸದೆ ಕೇಳಬೇಕು. ಅದನ್ನು ಬಿಟ್ಟು ಒಬ್ಬರ ಮೇಲೆ ಮತ್ತೊಬ್ಬರು ಮಾತಾಡಿದರೆ, ಮಾತಾಡುತ್ತಿರೋದು ಏನು ಅಂತ ಯಾರಿಗೂ ಸ್ಪಷ್ಟವಾಗಿ ಕೇಳಿಸಲ್ಲ, ಹಾಗಾಗೇ ತಾಳ್ಮೆ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಆಗ ಬಿಜೆಪಿ ನಾಯಕರು ಇದನ್ನೆಲ್ಲ ಮೊದಲು ನಿಮ್ಮ ಪಕ್ಷದ ಸದಸ್ಯರಿಗೆ ಹೇಳಿ ಅನ್ನುತ್ತಾರೆ. ಎಲ್ಲರಿಗೂ ಹೇಳುತ್ತೇನೆ ಕೇವಲ ನಿಮಗೆ ಮಾತ್ರ ಹೇಳುತ್ತಿಲ್ಲ ಎಂದು ಮುಖ್ಯಮಂತ್ತಿ ಮುಗುಳ್ನಗುತ್ತಾ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Assembly session: ನಿಮ್ಮದ್ದನ್ನೆಲ್ಲ ತೆಗೀಲಾ? ಅಂತ ಸದನದಲ್ಲಿ ಸಿದ್ದರಾಮಯ್ಯ ಹೇಳಿದ್ದು ಹತಾಶೆಯ ಪ್ರತೀಕ!