Assembly session: ನಿಮ್ಮದ್ದನ್ನೆಲ್ಲ ತೆಗೀಲಾ? ಅಂತ ಸದನದಲ್ಲಿ ಸಿದ್ದರಾಮಯ್ಯ ಹೇಳಿದ್ದು ಹತಾಶೆಯ ಪ್ರತೀಕ!
ಸರ್ಕಾರದ ವಿರುದ್ಧ ಎದ್ದಿರುವ ಅರೋಪಗಳು ಮತ್ತು ಖುದ್ದು ತಮ್ಮ ಮೇಲೆ ಬಂದಿರುವ ಮುಡಾ ಅಕ್ರಮ ಸೈಟುಗಳ ಅರೋಪಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿರುವಂತಿದೆ. ಈ ಹಿಂದೆ ಅವರು ವಿರೋಧ ಪಕ್ಷ ನಾಯಕರನ್ನು ಕಟುವಾಗಿ ಟೀಕಿಸಿದ್ದಾರೆ ಖಂಡಿಸಿದ್ದಾರೆಯೇ ಹೊರತು ಹೆದರಿಸುವ ಧ್ವನಿಯಲ್ಲಿ ಮಾತಾಡಿರಲಿಲ್ಲ.
ಬೆಂಗಳೂರು: ವಿಧಾನಸಭಾ ಅಧಿವೇಶನದ ಇಂದಿನ ಕಾರ್ಯಕಲಾಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಡವಾಗಿ ಆಗಮಿಸಿರದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಬಿಜೆಪಿ ಶಾಸಕ ಅರವಂದ್ ಬೆಲ್ಲದ್ ಮಾತಾಡುವಾಗ ಒಂದರೆಡು ಬಾರಿ ದಲಿತ ಅಂತ ಪದಬ:ಕೆ ಮಾಡುತ್ತಾರೆ. ಆಗ ಎದ್ದು ನಿಂತು ಶಾಂತರಾಗೇ ಮಾತಾಡುವ ಸಿದ್ದರಾಮಯ್ಯ, ದಲಿತ ಶಬ್ದ ಬಳಸಬೇಡಿ ಎಂದು ಎಷ್ಟು ಸಲ ಹೇಳಿದರೂ ಬಿಜೆಪಿ ನಾಯಕರು ತಮ್ಮ ಬುದ್ಧಿ ಬಿಡಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಂತ ಹೇಳಬೇಕು ಎನ್ನುತ್ತಾರೆ. ಅವರ ಮಾತಿಗೆ ಪ್ರತಿಕ್ರಿಯಿಸುವ ಬಿಜೆಪಿ ನಾಯಕರು; ಅದನ್ನು ಅಹಿಂದ ಎನ್ನುವ ಹೆಸರಲ್ಲಿ ಆರಂಭ ಮಾಡಿದ್ದೇ ನೀವು ಅನ್ನುತ್ತಾರೆ. ಅಗ ಸಿದ್ದರಾಮಯ್ಯ ಬಿಜೆಪಿ ನಾಯಕರ ಧೋರಣೆ ಮತ್ತು ಅವರು ಸರ್ಕಾರದಲ್ಲಿದ್ದಾಗ ರೂಪಿಸಿದ ಕಾರ್ಯಕ್ರಮಗಳನ್ನು ಗಮನಿಸಿದರೆ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿರುವುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ. ಅದಕ್ಕೆ ಅಶ್ವಥ್ ನಾರಾಯಣ ಅವರು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಅಮಯ್ಯ ಸಾಮಾಜಿಕ ನ್ಯಾಯದ ವಿರೋಧಿ ಅನ್ನುತ್ತಾರೆ. ಆಗ ಕೆರಳುವ ಸಿದ್ದರಾಮಯ್ಯ ನಿಮ್ಮ ಹಿಂದಿನದೆಲ್ಲ ತೆಗೀಲಾ? ಎಂದು ಹೆದರಿಸುವ ಬೆದರಿಸುವ ಮತ್ತು ಬ್ಲ್ಯಾಕ್ ಮೇಲ್ ಮಾಡುವ ಧಾಟಿಯಲ್ಲಿ ಮಾತಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ, ಈ ವಿಧೇಯಕ ಬೇಡ ಎಂದ ಪೈ