‘ಶುರುವಿಂದ ಕೊನೆವರೆಗೂ ನಗಿಸುವ ಚಿತ್ರ ಓಲ್ಡ್ ಮಾಂಕ್’; ಪಾತ್ರದ ಬಗ್ಗೆ ಮಾತಾಡಿ ನಿರೀಕ್ಷೆ ಹೆಚ್ಚಿಸಿದ ಅದಿತಿ
ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಫೆ.25ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಅದಿತಿ ವಿವರಿಸಿದ್ದಾರೆ.
ಅದಿತಿ ಪ್ರಭುದೇವ (Aditi Prabhudeva) ಮತ್ತು ಶ್ರೀನಿ ಅವರು ಎರಡನೇ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ರಂಗನಾಯಕಿ’ ಸಿನಿಮಾದಲ್ಲಿ ಜೊತೆಯಾಗಿದ್ದ ಅವರು ಈಗ ‘ಓಲ್ಡ್ ಮಾಂಕ್’ (Old Monk Movie) ಚಿತ್ರದ ಮೂಲಕ ಮತ್ತೆ ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅದಿತಿ ಪ್ರಭುದೇವ ಅವರು ಮಾತನಾಡಿದ್ದಾರೆ. ‘ಶ್ರೀನಿ ನಿರ್ದೇಶನದ ಸಿನಿಮಾ ಎಂದರೆ ವಿಶೇಷತೆ ಇದ್ದೇ ಇರುತ್ತದೆ. ‘ಓಲ್ಡ್ ಮಾಂಕ್’ ಚಿತ್ರ ಕೂಡ ಮನರಂಜನೆಯ ಕಿಕ್ ನೀಡಲಿದೆ. ಕುಟುಂಬ ಸಮೇತರಾಗಿ ಬಂದು ಎಂಜಾಯ್ ಮಾಡುವಂತಹ ಚಿತ್ರ ಇದು. ಆರಂಭದಿಂದ ಕೊನೆಯವರೆಗೂ ಈ ಸಿನಿಮಾ ನಗಿಸುತ್ತದೆ. ನನ್ನ ರಿಯಲ್ ಲೈಫ್ಗೆ ಹೆಚ್ಚು ಹತ್ತಿರವಾಗಿರುವಂತಹ ಪಾತ್ರ ಸಿಕ್ಕಿದೆ. ಯಾವಾಗಲೂ ನಗುತ್ತಾ, ಜೀವನವನ್ನು ಪಾಸಿಟಿವ್ ಆಗಿ ನೋಡುತ್ತ, ಏನೇ ಬಂದರೂ ತಲೆ ಕೆಡಿಸಿಕೊಳ್ಳದೇ ಲವಲವಿಕೆಯಿಂದ ಇರುವಂತಹ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಶ್ರೀನಿ (Srini) ಅವರಿಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಅವರ ಜೊತೆ ಈ ಸಿನಿಮಾದಲ್ಲಿ ನಟಿಸಿದ್ದು ಖುಷಿ ಎನಿಸಿತು’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.
ಇದನ್ನೂ ಓದಿ:
‘ಈಗ ಮೊಬೈಲ್ ಕೊಡು ಅಂದ್ರೆ ಬ್ರೇಕಪ್ ಆಗತ್ತೆ; ನಾವು ಹಾಗಿಲ್ಲ’: ಎಂಗೇಜ್ಮೆಂಟ್ ಬಳಿಕ ಅದಿತಿ ಮಾತು
‘ಅವೆಂಜರ್ಸ್’ ಗೊತ್ತು, ಆದ್ರೆ ಇದೇನು ರಿವೆಂಜರ್ಸ್? ಹೊಸ ಪ್ರಯತ್ನದಿಂದ ಗಮನ ಸೆಳೆದ ‘ಓಲ್ಡ್ ಮಾಂಕ್’ ಶ್ರೀನಿ