Shruthi: ‘ಕಲಾವಿದರಾಗಿ ಹುಟ್ಟಿದ್ದಕ್ಕೆ ಸಾರ್ಥಕ ಅನಿಸುತ್ತೆ’: ‘ವೀರಂ’ ಟ್ರೇಲರ್​ ಬಿಡುಗಡೆ ವೇಳೆ ಶ್ರುತಿ ಮಾತು

|

Updated on: Mar 23, 2023 | 4:53 PM

Veeram Movie Trailer Launch: ‘ವೀರೇಶ್​’ ಚಿತ್ರಮಂದಿರದಲ್ಲಿ ‘ವೀರಂ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಅಲ್ಲಿ ನೆರೆದಿದ್ದ ಅಭಿಮಾನಿಗಳ ಪ್ರೀತಿಗೆ ನಟಿ ಶ್ರುತಿ ಅವರು ಸಲಾಂ ಎಂದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ (Shruthi) ಅವರು ಈಗಲೂ ಸಖತ್ ಬೇಡಿಕೆ ಹೊಂದಿದ್ದಾರೆ. ಪ್ರಜ್ವಲ್​ ದೇವರಾಜ್​ ಅಭಿನಯದ ‘ವೀರಂ’ ಸಿನಿಮಾದಲ್ಲಿ ಶ್ರುತಿ ಕೂಡ ನಟಿಸಿದ್ದಾರೆ. ಬೆಂಗಳೂರಿನ ‘ವೀರೇಶ್​’ ಚಿತ್ರಮಂದಿರದಲ್ಲಿ ಇಂದು (ಮಾರ್ಚ್​ 23) ಈ ಸಿನಿಮಾದ ಟ್ರೇಲರ್​ (Veeram Movie Trailer) ಬಿಡುಗಡೆ ಮಾಡಲಾಯಿತು. ಮಲ್ಟಿಪ್ಲೆಕ್ಸ್​ ಅಥವಾ ಸ್ಟಾರ್​ ಹೋಟೆಲ್​ಗಳ ಬದಲಿಗೆ ಚಿತ್ರಮಂದಿರದಲ್ಲಿ ಟ್ರೇಲರ್​ ರಿಲೀಸ್​ ಕಾರ್ಯಕ್ರಮ ಮಾಡಿದ್ದು ಶ್ರುತಿ ಅವರಿಗೆ ಖುಷಿ ನೀಡಿತು. ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನೋಡಿ ಅವರು ಕೊಂಚ ಎಮೋಷನಲ್​ ಆದರು. ‘ಇಲ್ಲಿ ಕಾರ್ಯಕ್ರಮ ಮಾಡಿದ್ದು ನನಗೆ ವಿಶೇಷ ಅನುಭವ. ಸಿನಿಮಾವನ್ನು ಪ್ರೀತಿಸುವ ಜನ ಸೇರಿದ್ದಾರೆ. ಜನರ ಪ್ರೀತಿ, ಶಿಳ್ಳೆ, ಚಪ್ಪಾಳೆ ನೋಡಿದಾಗ ನಾವು ಕಲಾವಿದರಾಗಿ ಹುಟ್ಟಿದ್ದು ಸಾರ್ಥಕ ಆಯಿತು ಎನಿಸುತ್ತದೆ’ ಎಂದು ಶ್ರುತಿ ಹೇಳಿದ್ದಾರೆ. ಏಪ್ರಿಲ್​ 7ರಂದು ‘ವೀರಂ’ ಸಿನಿಮಾ (Veeram Movie) ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Mar 23, 2023 04:53 PM