ಥ್ರಿಲ್ಲರ್ ಮಂಜು, (Thriller Manju) ಕನ್ನಡ ಚಿತ್ರರಂಗದ (Sandalwood) ಹಿರಿಯ ಫೈಟ್ ಮಾಸ್ಟರ್ (Action choreography) ಹಾಗೂ ನಟರೂ ಸಹ. ಫೈಟ್ ಕೊರಿಯಾಗ್ರಫಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಗಳನ್ನು ಎಬ್ಬಿಸಿದವರು ಥ್ರಿಲ್ಲರ್ ಮಂಜು. ಬಾಡಿ ಬಿಲ್ಡಿಂಗ್ ಅಥವಾ ಮಾರ್ಷಲ್ ಆರ್ಟ್ಗಳನ್ನು ಕಲಿಯಲು ಸೂಕ್ತ ಸೌಲಭ್ಯಗಳು, ಸಂಪನ್ಮೂಲಗಳು ಇಲ್ಲದ ಸಮಯದಲ್ಲಿಯೇ ಫೈಟಿಂಗ್ ಕಲಿಯಲು ಆರಂಭಿಸಿ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡ ಥ್ರಿಲ್ಲರ್ ಮಂಜುಗೆ ಗುರು ಯಾರು? ಅವರೇ ಹೇಳಿದ್ದಾರೆ.