ಸಂಗೀತಾ ವಿರುದ್ಧವೇ ಕಾರ್ತಿಕ್​, ತನಿಷಾ ಸಂಚು? ಇಷ್ಟು ದಿನದ ಸಂಬಂಧ, ನಂಬಿಕೆ ಈಗ ಅಂತ್ಯ

Updated on: Nov 16, 2023 | 10:45 AM

ಬಿಗ್​ ಬಾಸ್​ ಮನೆಯಲ್ಲಿ ಟಫ್​ ಸ್ಪರ್ಧಿ ಎನಿಸಿಕೊಂಡಿರುವ ನಟಿ ಸಂಗೀತಾ ಶೃಂಗೇರಿ ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಹುನ್ನಾರ ಮಾಡಲಾಗಿದೆ. ಅದು ಸಂಗೀತಾ ಗಮನಕ್ಕೂ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಕೆಲವರನ್ನು ಪ್ರಶ್ನೆ ಮಾಡಿದ್ದಾರೆ.

ಪ್ರತಿ ದಿನವೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಹೊಸ ಹೊಸ ಟ್ವಿಸ್ಟ್​ ಸಿಗುತ್ತಿದೆ. ಇಷ್ಟು ದಿನಗಳ ಕಾಲ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಮಧ್ಯೆ ಒಂದು ಒಡನಾಟ ಬೆಳೆದಿತ್ತು. ಇಬ್ಬರ ನಡುವೆ ನಂಬಿಕೆ ಇತ್ತು. ಆದರೆ ಈಗ ಆ ನಂಬಿಕೆಗೆ ಪೆಟ್ಟು ಬಿದ್ದಂತಿದೆ. ನಾಮಿನೇಷನ್​ ವಿಚಾರದಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಕೆಲವರು ಹುನ್ನಾರ ನಡೆಸಿದ್ದಾರೆ. ಅದು ಸಂಗೀತಾ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್​ ಮಹೇಶ್​ (Karthik Mahesh), ವರ್ತೂರು ಸಂತೋಷ್​, ತನಿಷಾ ಕುಪ್ಪಂಡ ಅವರ ಬಳಿ ಇದನ್ನು ಸಂಗೀತಾ ಚರ್ಚಿಸಿದ್ದಾರೆ. ‘ಇಷ್ಟು ದಿನ ನಮ್ಮಲ್ಲಿ ಒಂದು ಫ್ರೆಂಡ್​ಶಿಪ್​, ನಂಬಿಕೆ ಇತ್ತು. ಅದು ಈಗ ಬ್ರೇಕ್​ ಆಗಿದೆ’ ಎಂದು ಸಂಗೀತಾ ಮುಲಾಜಿಲ್ಲದೇ ಹೇಳಿದ್ದಾರೆ. ನ.16ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More