‘ನಾನು ಲವ್ ಮಾಡಿದ ರೀತಿ ಅನಿಸಿತಾ?’; ಕುಟುಂಬದವರಿಗೆ ಸಂಗೀತಾ ನೇರ ಪ್ರಶ್ನೆ

|

Updated on: Dec 27, 2023 | 2:52 PM

ಸಂಗೀತಾ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈಗ ಅವರಿಗೆ ಕೊರೆಯುತ್ತಿರುವ ಎಲ್ಲಾ ಪ್ರಶ್ನೆಗಳನ್ನು ತಾಯಿಯ ಬಳಿ ಕೇಳಿದ್ದಾರೆ.

ಬಿಗ್ ಬಾಸ್​​ಗೆ ಬಂದ ಆರಂಭದ ದಿನಗಳಲ್ಲಿ ಸಂಗೀತಾ ಶೃಂಗೇರಿ (Sanageetha Sringeri) ಹಾಗೂ ಕಾರ್ತಿಕ್ ಮಹೇಶ್ ಕ್ಲೋಸ್ ಆಗಿದ್ದರು. ಇವರ ಮಧ್ಯೆ ಪ್ರೀತಿ ಮೂಡುತ್ತದೆ ಎಂದು ಅನೇಕರು ಊಹಿಸಿದರು. ಆದರೆ, ದಿನ ಕಳೆದಂತೆ ಇವರ ನಡುವೆ ವೈಮನಸ್ಸು ಬೆಳೆಯಿತು. ಈಗ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಉಳಿದಿಲ್ಲ. ಸಂಗೀತಾಗೆ ಎಲ್ಲರೂ ತಮ್ಮನ್ನೇ ಟಾರ್ಗೆಟ್ ಮಾಡಿದ ಭಾವ ಕಾಡುತ್ತಿದೆ. ಅವರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಕೊರೆಯುತ್ತಿವೆ. ಸಂಗೀತಾ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈಗ ಅವರಿಗೆ ಕೊರೆಯುತ್ತಿರುವ ಎಲ್ಲಾ ಪ್ರಶ್ನೆಗಳನ್ನು ತಾಯಿಯ ಬಳಿ ಕೇಳಿದ್ದಾರೆ. ಇದಕ್ಕೆ ಅವರ ಕಡೆಯಿಂದ ಉತ್ತರ ಸಿಗುತ್ತದೆಯೇ ಅಥವಾ ಇಲ್ಲವ ಎಂಬುದಕ್ಕೆ ಇಂದಿನ (ಡಿಸೆಂಬರ್ 27) ಎಪಿಸೋಡ್​ ನೋಡಬೇಕು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ