ಜಗಳ ಬೇಡ, ಎಲ್ಲವನ್ನೂ ಮರೆತು ಸಾಮರಸ್ಯದಿಂದ ಇರಿ: ಸಂಗೀತಾ
Sangeetha Sringeri: ಬಿಗ್ಬಾಸ್ ಮನೆಯಲ್ಲಿ ಐರನ್ ಲೇಡಿಯಂತಿದ್ದ ಸಂಗೀತಾ ಶೃಂಗೇರಿ ಹೊರಗೆ ಬಂದ ಬಳಿಕ ಸ್ನೇಹ-ಶಾಂತಿಯ ಮಾತನಾಡಿದ್ದಾರೆ. ಅಭಿಮಾನಿಗಳಲ್ಲಿ ಮನವಿಯನ್ನು ಸಹ ಮಾಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 10ರ (BiggBoss) ಪ್ರಮುಖ ಸ್ಪರ್ಧಿ ಸಂಗೀತಾ ಶೃಂಗೇರಿ. ಬಿಗ್ಬಾಸ್ ಮನೆಯಲ್ಲಿ ಅದ್ಭುತವಾಗಿ ಆಡಿದರು. ಹಲವರೊಟ್ಟಿಗೆ ಜಗಳ ಸಹ ಆಡಿದ್ದರು. ಅದರಲ್ಲಿಯೂ ಕಾರ್ತಿಕ್ ಹಾಗೂ ಸಂಗೀತಾ ಶೃಂಗೇರಿ ಅವರ ನಡುವಿನ ಭಿನ್ನಾಭಿಪ್ರಾಯ ಜೋರಾಗಿ ಸದ್ದಾಗಿತ್ತು. ಹೊರಗೆ ಸಂಗೀತಾ ಹಾಗೂ ಕಾರ್ತಿಕ್ ಅಭಿಮಾನಿಗಳ ನಡುವೆ, ಸಂಗೀತಾ-ವಿನಯ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಆಗಿತ್ತು. ಕೆಲವರು ಸಂಗೀತಾರ ಕುಟುಂಬವನ್ನು ಸಹ ಗುರಿ ಮಾಡಿಕೊಂಡು ಪೋಸ್ಟ್ಗಳನ್ನು ಹಂಚಿಕೊಂಡಿದ್ದರು. ಇದೀಗ ಬಿಗ್ಬಾಸ್ನಿಂದ ಹೊರಗೆ ಬಂದಿರುವ ಸಂಗೀತಾ, ಫ್ಯಾನ್ಸ್ ವಾರ್ ಬೇಡ. ಒಳಗೆ ಇದ್ದಾಗ ಗೆಲ್ಲುವುದಕ್ಕಾಗಿ ನಾವು ಒಬ್ಬರ ಮೇಲೊಬ್ಬರು ಮಾತನಾಡಿಕೊಂಡಿದ್ದೆವು, ಆದರೆ ಹೊರಗೆ ಬಂದ ಮೇಲೆ ಎಲ್ಲರೂ ಫ್ರೆಂಡ್ಸ್ ಆಗಿದ್ದೀವಿ. ನೀವು ಸಹ ಅದನ್ನೆಲ್ಲ ಮರೆತು ಎಲ್ಲರೂ ಒಟ್ಟಿಗೆ ಇರಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ