‘ದಿಗಂತ್ ನನ್ನ ಕ್ರಶ್’: ಮನಸ್ಸಿನ ಮಾತು ಹಂಚಿಕೊಂಡ ಸಂಗೀತಾ ಶೃಂಗೇರಿ
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿ ಬಂದಿರುವ ನಟಿ ಸಂಗೀತಾ ಶೃಂಗೇರಿ ಅವರು ಈಗ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ದಿಗಂತ್ ಜೊತೆ ಅವರು ನಟಿಸಿರುವ ‘ಮಾರಿಗೋಲ್ಡ್’ ಸಿನಿಮಾದ ಟೀಸರ್ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳನ್ನು ಸಂಗೀತಾ ಹಂಚಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಹೆಚ್ಚಿದೆ. ಒಂದೆಡೆ ‘777 ಚಾರ್ಲಿ’ ಸಿನಿಮಾದ ಗೆಲುವು, ಇನ್ನೊಂದೆಡೆ ‘ಬಿಗ್ ಬಾಸ್ ಕನ್ನಡ’ ಶೋ. ಈ ಎರಡೂ ಕಾರಣಗಳಿಂದ ಅವರು ಫೇಮಸ್ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ದಿಗಂತ್ ಮಂಚಾಲೆ (Diganth Manchale) ಜೊತೆ ಸಂಗೀತಾ ಶೃಂಗೇರಿ ಅವರು ‘ಮಾರಿಗೋಲ್ಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಫೆಬ್ರವರಿ 6) ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಸಂಗೀತಾ ಮಾತನಾಡಿದ್ದಾರೆ. ‘ನಾನು ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಮೊದಲ ಕಾರಣ ಕಥೆ. ಇನ್ನೊಂದು ಕಾರಣ ದಿಗಂತ್. ಅವರ ಜೊತೆ ಆ್ಯಕ್ಟ್ ಮಾಡಬೇಕು ಅಂತ ನನಗೆ ಚಿಕ್ಕ ವಯಸ್ಸಿನಿಂದಲೂ ಕನಸು ಇತ್ತು. ನನ್ನ ಬಾಲ್ಯದ ಕ್ರಶ್ ಯಾರು ಅಂತ ಅನೇಕರು ಕೇಳಿದ್ದಾರೆ. ಸಿನಿಮಾ ಜಗತ್ತಿನಲ್ಲಿ ದಿಗಂತ್ (Diganth) ಅವರು ನನ್ನ ಕ್ರಶ್ ಆಗಿದ್ದರು. ಶೂಟಿಂಗ್ ಸಂದರ್ಭದಲ್ಲಿ ನಾನು ಅದನ್ನು ಅವರಿಗೆ ಹೇಳಿದ್ದೇನೆ’ ಎಂದಿದ್ದಾರೆ ಸಂಗೀತಾ ಶೃಂಗೇರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ