‘ನಾನು ಏನು ಅಂತ ಜಗತ್ತಿಗೆ ತೋರಿಸಬೇಕಿತ್ತು’; ಸಂಗೀತಾ ಶೃಂಗೇರಿ ನೇರ ಮಾತು

|

Updated on: Feb 01, 2024 | 8:07 AM

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ 112 ದಿನ ಇದ್ದು ಬಂದಿದ್ದಾರೆ. ಅವರ ಬೇಡಿಕೆ ಸದ್ಯಕ್ಕಂತೂ ಕಡಿಮೆ ಆಗುವುದಿಲ್ಲ. ಅವರನ್ನು ಹುಡುಕಿ ಹೊಸ ಹೊಸ ಆಫರ್​ಗಳು ಬರುತ್ತಿವೆ. ಕಪ್ ಗೆದ್ದಿಲ್ಲ ಎನ್ನುವ ಬಗ್ಗೆ ಅವರಿಗೆ ಹೆಚ್ಚು ಬೇಸರ ಇಲ್ಲ.

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ 112 ದಿನ ಕಳೆದು ಬಂದಿದ್ದಾರೆ. ಅವರ ಬೇಡಿಕೆ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ಅವರನ್ನು ಹುಡುಕಿ ಹೊಸ ಹೊಸ ಆಫರ್​ಗಳು ಬರುತ್ತಿವೆ. ಕಪ್ ಗೆದ್ದಿಲ್ಲ ಎನ್ನುವ ಬಗ್ಗೆ ಅವರಿಗೆ ಹೆಚ್ಚು ಬೇಸರ ಇಲ್ಲ. ‘ನಾನು ಏನು ಅಂತ ಜಗತ್ತಿಗೆ ತೋರಿಸಬೇಕಿತ್ತು. ಆ ಕೆಲಸವನ್ನು ಮಾಡಿದ್ದೇನೆ. ತುಂಬಾ ಖುಷಿಯಾಗುತ್ತದೆ. ಹೊರ ಜಗತ್ತಲ್ಲಿ ಸಮಸ್ಯೆಗಳಿಂದ ಓಡುತ್ತಿದ್ದೆ. ಆದರೆ, ಬಿಗ್ ಬಾಸ್ (Bigg Boss) ಮನೆಯಲ್ಲಿ ನೆವರ್​ಗಿವ್​ಅಪ್ ಆ್ಯಟಿಟ್ಯೂಡ್ ಬೆಳೆಯಿತು’ ಎಂದಿದ್ದಾರೆ ಸಂಗೀತಾ. ಸಂಗೀತಾ ಅವರು ಎರಡನೇ ರನ್ನರ್​ಅಪ್ ಆಗಿ ಹೊರ ಹೊಮ್ಮಿದ್ದಾರೆ. ಕಾರ್ತಿಕ್ ಕಪ್ ಗೆದ್ದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ