ಬಿಗ್​ಬಾಸ್ ಗೆದ್ದ ಕಾರ್ತಿಕ್ ಅಭಿಮಾನಿಗಳಲ್ಲಿ ಮಾಡಿದ್ದಾರೆ ವಿಶೇಷ ಮನವಿ

ಬಿಗ್​ಬಾಸ್ ಗೆದ್ದ ಕಾರ್ತಿಕ್ ಅಭಿಮಾನಿಗಳಲ್ಲಿ ಮಾಡಿದ್ದಾರೆ ವಿಶೇಷ ಮನವಿ

ಮಂಜುನಾಥ ಸಿ.
|

Updated on: Jan 31, 2024 | 10:59 PM

Karthik Mahesh: ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದಿರುವ ಕಾರ್ತಿಕ್ ಮಹೇಶ್, ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಕೆಲ ದಿನಗಳ ಹಿಂದಷ್ಟೆ ಮುಗಿದಿದೆ. ನಟ ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಿಗ್​ಬಾಸ್ ಗೆದ್ದಾಗಿನಿಂದಲೂ ಟಿವಿ ಮಾಧ್ಯಮಗಳಿಗೆ, ಯೂಟ್ಯೂಬ್​ ಚಾನೆಲ್​ಗಳಿಗೆ ಒಂದರ ನಂತರ ಒಂದರಂತೆ ಸಂದರ್ಶನಗಳನ್ನು ಕಾರ್ತಿಕ್ ನೀಡುತ್ತಿದ್ದಾರೆ. ಇದರ ನಡುವೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದು ಅಭಿಮಾನಿಗಳಿಗೆ ಸಂದೆಶವೊಂದನ್ನು ನೀಡಿದ್ದಾರೆ. ಹಲವಾರು ಮಂದಿ ಅಭಿಮಾನಿಗಳು, ಗೆಳೆಯರು ಸತತವಾಗಿ ಕರೆ, ಸಂದೇಶಗಳನ್ನು ಕಳಿಸುತ್ತಿದ್ದಾರೆ. ಆದರೆ ಸಂದರ್ಶನಗಳಲ್ಲಿ ಬ್ಯುಸಿಯಾಗಿರುವ ಕಾರಣ ಯಾರಿಗೂ ಸರಿಯಾಗಿ ರಿಪ್ಲೈ ಮಾಡಲು ಆಗುತ್ತಿಲ್ಲ. ಇನ್ನು ಕೆಲವು ದಿನ ಸಮಯ ಕೊಡಿ, ಎಲ್ಲರನ್ನೂ ಒಟ್ಟಿಗೆ ಭೇಟಿಯಾಗುತ್ತೀನಿ, ಒಂದು ಮೀಟ್​ಅಪ್ ಆಯೋಜನೆ ಮಾಡುತ್ತೇನೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ