ಸ್ಯಾಂಟ್ರೋ ರವಿ ಕ್ರಿಮಿ ಅಷ್ಟೇ, ಆತನ ಹಿಂದೆ ಮುನ್ನೂರು ಜನರಿದ್ದಾರೆ: ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ
ಸ್ಯಾಂಟ್ರೋ ರವಿ ಹಿಂದಿರುವ ಆಸಾಮಿಗಳ ಬಣ್ಣ ಬಯಲಾಗಬೇಕು. ಅಮಾಯಕ ಹೆಣ್ಣುಮಕ್ಕಳನ್ನು ಕತ್ತಲೆಗೆ ತಳ್ಳಿದವರ ಹೆಡೆಮುರಿ ಕಟ್ಟಬೇಕು ಎಂದು ಮೈಸೂರಿನ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಹೇಳಿದ್ದಾರೆ.
ಮೈಸೂರು: ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಬಂಧನ (Santro Ravi Arrest) ಹೆಚ್ಚು ಮಹತ್ವದ್ದಲ್ಲ. ಆತ ಕೇವಲ ಒಂದು ಕ್ರಿಮಿ ಅಷ್ಟೆ. ಆತನ ಹಿಂದಿರುವ ಆಸಾಮಿಗಳ ಬಣ್ಣ ಬಯಲಾಗಬೇಕು ಎಂದು ಮೈಸೂರಿನ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಹೇಳಿದ್ದಾರೆ. ಸ್ಯಾಂಟ್ರೋ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸ್ಟ್ಯಾನ್ಲಿ ದೂರು ನೀಡಿದ್ದರು. ಇದೀಗ ಬಂಧನದ ಬಗ್ಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಮೂರು. ಆದರೆ ಸ್ಯಾಂಟ್ರೋ ರವಿ ಹಿಂದೆ ಮುನ್ನೂರು ಜನರಿದ್ದಾರೆ. ಅಮಾಯಕ ಹೆಣ್ಣುಮಕ್ಕಳನ್ನು ಕತ್ತಲೆಗೆ ತಳ್ಳಿದವರ ಹೆಡೆಮುರಿ ಕಟ್ಟಬೇಕು. ಸಮಾಜದಲ್ಲಿರುವ ವೈಟ್ಕಾಲರ್ ಕ್ರಿಮಿನಲ್ಗಳನ್ನು ಬಂಧಿಸಬೇಕು. ಸ್ಯಾಂಟ್ರೋ ರವಿ ಬಂಧಿಸಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಎಡಿಜಿಪಿಗೆ ನಮಸ್ಕಾರ ತಿಳಿಸುವೆ. ಸಂತ್ರಸ್ತೆಗೆ ನ್ಯಾಯ ಸಿಗುವಂತಾಗಬೇಕು, ಪರಿಹಾರ ಒದಗಿಸಬೇಕು. ಪ್ರಕರಣ ಗಂಭೀರವಾಗಿ ಪರಿಗಣಿಸಿ ಕ್ರಿಮಿಗಳಿಗೆ ಶಿಕ್ಷೆ ಕೊಡಿಸಬೇಕು. ಇವನ ಅಕ್ರಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿ ಸಂತ್ರಸ್ತೆಯರಿಗೆ ಹಂಚಬೇಕು ಎಂದು ಒತ್ತಾಯಿಸಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ