ಯುವತಿಯರಿಗೆ ಕಾರುಗಳ ಹೆಸರು ನೀಡಿ ವೇಶ್ಯಾವಾಟಿಕೆ ನಡೆಸುವ ಸ್ಯಾಂಟ್ರೋ ರವಿ ನಂತರ ತನ್ನ ಕ್ಲೈಂಟ್​ಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಾನೆ!

ಯುವತಿಯರಿಗೆ ಕಾರುಗಳ ಹೆಸರು ನೀಡಿ ವೇಶ್ಯಾವಾಟಿಕೆ ನಡೆಸುವ ಸ್ಯಾಂಟ್ರೋ ರವಿ ನಂತರ ತನ್ನ ಕ್ಲೈಂಟ್​ಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಾನೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2023 | 3:04 PM

ಮೊದಲು ತನ್ನೆಲ್ಲ ಹೊಲಸು ವ್ಯವಹಾರಗಳಿಗೆ ಸ್ಯಾಂಟ್ರೋ ಕಾರು ಬಳಸುತ್ತಿದ್ದ ಧೂರ್ತ ರವಿ ಈಗ ಐಷಾರಾಮಿ ಕಾರಲ್ಲಿ ಓಡಾಡುತ್ತಾನಂತೆ!

ಬೆಂಗಳೂರು:  ಸ್ಯಾಂಟ್ರೋ ರವಿ (Santro Ravi) ಭಾರಿ ಚರ್ಚೆಯಲ್ಲಿದ್ದಾನೆ ಮಾರಾಯ್ರೇ. ಟಿವಿ9 ಕನ್ನಡ ವಾಹಿನಿಯು ರವಿಯ ಜಾತಕ ಜಾಲಾಡಿ ಹಲವು ಆಘಾತಕಾರಿ ಸಂಗತಿಗಳನ್ನು ಪತ್ತೆ ಮಾಡಿದೆ. ಇವನು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮತ್ತು ದೊಡ್ಡ ದೊಡ್ಡ ಕುಳಗಳಿಗೆ ಅವರವರ ಅಭಿರುಚಿ ಮತ್ತು ಆದ್ಯತೆಗೆ ತಕ್ಕಂತೆ ಯುವತಿಯರನ್ನು ಒದಗಿಸುವ ಒಂದು ವೇಶ್ಯಾವಾಟಿಕೆಯ ದಂಧೆ (prostitution racket ) ನಡೆಸುತ್ತಾನೆ. ಬೇರೆ ಬೇರೆ ವಯೋಮಾನದ ಯುವತಿಯರಿಗೆ ಕಾರುಗಳ ಹೆಸರನ್ನು ನೀಡಿ ತನ್ನ ಕ್ಲೈಂಟ್ ಗಳೊಂದಿಗೆ (clients) ವ್ಯವಹಾರ ಕುದುರಿಸುವಾಗ ಆ ಕೋಡ್ ವರ್ಡ್ ಬಳಸುತ್ತಾನೆ. ಕ್ಲೈಂಟ್ ಗಳ ಜೊತೆ ನಡೆಸುವ ಸಂಭಾಷಣೆಯನ್ನ ರೆಕಾರ್ಡ್ ಮಾಡಿಕೊಂಡು ಅವರನ್ನು ಬ್ಕ್ಯಾಕ್ ಮೇಲ್ ಮಾಡಲು ಬಳಸುತ್ತಾನೆ. ಮೊದಲು ತನ್ನೆಲ್ಲ ಹೊಲಸು ವ್ಯವಹಾರಗಳಿಗೆ ಸ್ಯಾಂಟ್ರೋ ಕಾರು ಬಳಸುತ್ತಿದ್ದ ಧೂರ್ತ ರವಿ ಈಗ ಐಷಾರಾಮಿ ಕಾರಲ್ಲಿ ಓಡಾಡುತ್ತಾನಂತೆ!

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ