ಸ್ಯಾಂಟ್ರೋ ರವಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಒಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ: ಕೆ ವಿ ಸ್ಟ್ಯಾನ್ಲೀ, ಒಡನಾಡಿ ಸಂಸ್ಥೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 11, 2023 | 3:05 PM

ರವಿ ತಪ್ಪೊಪ್ಪಿಗೆ ಪತ್ರದ ಪ್ರತಿಯೊಂದನ್ನು ತಮ್ಮ ಕೈಯಲ್ಲಿ ಹಿಡಿದಿದ್ದ ಸ್ಟ್ಯಾನ್ಲೀ ಅದೊಂದು ಸರ್ಕಾರೀ ದಾಖಲೆ ಅಂತ ಹೇಳಿದರು.

ಮೈಸೂರು: ಒಡನಾಡಿ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಕೆ ವಿ ಸ್ಟ್ಯಾನ್ಲೀ (KV Stanley) ಅವರು ಸ್ಯಾಂಟ್ರೋ ರವಿಗೆ (Santro Ravi) ಸಂಬಂಧಿಸಿದಂತೆ ಒಂದು ರೋಚಕ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಶೇರ್ ಮಾಡಿದ್ದಾರೆ. ಮೈಸೂರಲ್ಲಿ ಗುರುವಾರ ಮಾತಾಡಿದ ಅವರು ಬೆಂಗಳೂರು ರಾಜರಾಜೇಶ್ವರಿ ನಗರ (Raja Rajeshwari Nagar) ಪೊಲೀಸ್ ಠಾಣೆಗೆ ರವಿ ಒಂದು ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟಿದ್ದು ಅದರಲ್ಲಿ ಅವನು ತಾನು ಯಾರ ಜೊತೆ ಸಂಪರ್ಕ ಇಟ್ಟುಕೊಂಡಿದ್ದೆ, ಯಾರ ವರ್ಗಾವಣೆಗಳನ್ನು ಮಾಡಿಸಿದೆ ಮೊದಲಾದ ಸಂಗತಿಗಳನ್ನೆಲ್ಲ ವಿವರಿಸಿದ್ದಾನೆ ಎಂದು ಹೇಳಿದರು. ರವಿ ತಪ್ಪೊಪ್ಪಿಗೆ ಪತ್ರದ ಪ್ರತಿಯೊಂದನ್ನು ತಮ್ಮ ಕೈಯಲ್ಲಿ ಹಿಡಿದಿದ್ದ ಸ್ಟ್ಯಾನ್ಲೀ ಅದೊಂದು ಸರ್ಕಾರೀ ದಾಖಲೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ