‘ನಾನೇ ಕಥೆ ಹುಡುಕಿಕೊಂಡು ಹೋದೆ’; ‘ಅಶೋಕ ಬ್ಲೇಡ್’ ಸಿನಿಮಾ ಬಗ್ಗೆ ನೀನಾಸಂ ಸತೀಶ್ ಮಾತು
ನೀನಾಸಂ ಸತೀಶ್ ಹೊಸ ಚಿತ್ರಕ್ಕೆ ‘ಅಶೋಕ ಬ್ಲೇಡ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಟೈಟಲ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದ ಮುಹೂರ್ತ ಇಂದು (ಮೇ 15) ನೆರವೇರಿದೆ.
ನಟ ನೀನಾಸಂ ಸತೀಶ್ ಅವರು (Sathish Ninasam) ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಅಶೋಕ ಬ್ಲೇಡ್’ (Ashoka Blade) ಎಂದು ಶೀರ್ಷಿಕೆ ಇಡಲಾಗಿದೆ. ಈ ಟೈಟಲ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದ ಮುಹೂರ್ತ ಇಂದು (ಮೇ 15) ನೆರವೇರಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂಗೆ ಜತೆಯಾಗಿ ಕಾವ್ಯಾ ಶೆಟ್ಟಿ (Kavya Shetty) ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಿರುವ ಅವರು, ‘ಸಾಮಾನ್ಯವಾಗಿ ಹೀರೋಗೆ ಕಥೆ ಹೇಳೋಕೆ ನಿರ್ದೇಶಕರು ಬರುತ್ತಾರೆ. ಆದರೆ, ನಾನೇ ಕಥೆಯನ್ನು ಹುಡುಕಿಕೊಂಡು ಹೋಗಿದ್ದು’ ಎಂದು ಹೇಳಿದ್ದಾರೆ. ಈ ಮೂಲಕ ಸಿನಿಮಾ ಆರಂಭವಾಗಿದ್ದು ಹೇಗೆ ಎನ್ನುವ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.