ರಾಖಿಯಲ್ಲಿ ದಾಖಲಾಯ್ತು ತಾಯಿ-ಮಗನ ಆಪ್ತ ಕ್ಷಣ; ಮೋದಿಗೆ ವಿಶೇಷ ರಾಖಿ ಕಟ್ಟಿದ ಬಾಲಕಿ

|

Updated on: Aug 19, 2024 | 4:42 PM

ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ರಕ್ಷಾಬಂಧನದ ಪ್ರಯುಕ್ತ ಸರದಿಯಲ್ಲಿ ತೆರಳಿ ಮೋದಿಗೆ ರಾಖಿ ಕಟ್ಟಿದ್ದಾರೆ. ತಾವೇ ವಿಶೇಷವಾಗಿ ರಾಖಿಯನ್ನು ತಯಾರಿಸಿ ಕಟ್ಟಿರುವ ವಿದ್ಯಾರ್ಥಿಗಳ ಉತ್ಸಾಹ ಕಂಡು ಮೋದಿ ಅತ್ಯಂತ ಸಂತೋಷ ಪಟ್ಟಿದ್ದಾರೆ.

ಇಂದು ರಕ್ಷಾಬಂಧನವಾದ್ದರಿಂದ ಮುಂಜಾನೆಯಿಂದಲೇ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಎದುರು ವಿವಿಧ ಶಾಲೆಗಳ ಬಾಲಕಿಯರು ತಾಸುಗಟ್ಟಲೆ ಕಾದು ಮೋದಿಗೆ ರಾಖಿ ಕಟ್ಟಿ ಸಂಭ್ರಮಾಚರಿಸಿದರು. ಪ್ರಧಾನಿಯ ಸುತ್ತಲೂ ಸೇರಿದ್ದ ಮಕ್ಕಳು ಮೋದಿಗೆ ತಾವು ತಯಾರಿಸಿದ ವಿಶೇಷವಾದ ರಾಖಿಗಳನ್ನು ಕಟ್ಟಿದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಪಾದ ತೊಳೆಯುತ್ತಿರುವ ಫೋಟೋವನ್ನೊಳಗೊಂಡ ಬೃಹತ್ ರಾಖಿಯನ್ನು ತಯಾರಿಸಿದ್ದ ಬಾಲಕಿ ಗಮನ ಸೆಳೆದಳು. ಆ ರಾಖಿಯನ್ನು ತನ್ನ ಕೈಗೆ ಕಟ್ಟಿದ ಬಾಲಕಿಯ ಜೊತೆ ಮೋದಿ ಕೆಲಕಾಲ ಮಾತನಾಡಿದರು.

ಬೇರೆ ವಿದ್ಯಾರ್ಥಿಗಳು ರಾಖಿ ಕಟ್ಟಲು ಮುಂದಾದಾಗ, ಪ್ರಧಾನಿ ಮೋದಿ ಅವರನ್ನು ಪ್ರೀತಿಯ ನಗುವಿನೊಂದಿಗೆ ಸ್ವಾಗತಿಸಿದರು, ಅವರ ಹೆಸರು ಮತ್ತು ತರಗತಿಗಳನ್ನು ಕೇಳಿದರು. ಪಿಎಂ ಮೋದಿ ಅವರು ಕುರ್ಚಿಯ ಮೇಲೆ ಕುಳಿತಿದ್ದು, ಅವರಿಗೆ ರಾಖಿಗಳನ್ನು ಕಟ್ಟಲು ಶಾಲಾ ವಿದ್ಯಾರ್ಥಿನಿಯರು ಸರದಿಯಲ್ಲಿ ಕಾಯುತ್ತಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ