ಮೈಸೂರು ದಸರಾ ಮಹೋತ್ಸವ 2025: ಅರಮನೆಗೆ ಎರಡನೇ ಬ್ಯಾಚ್​ನ 5 ಆನೆಗಳ ಆಗಮನ, ನಾಳೆಯಿಂದ ತಾಲೀಮು

ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2025 | 8:03 PM

ಮೈಸೂರು ನಗರವಾಸಿಗಳಿಗೆ ಆನೆಗಳು ಲಾರಿಗಳಲ್ಲಿ ಅರಮನೆಗೆ ಬರೋದನ್ನ ನೋಡೋದೇ ಒಂದು ಖುಷಿ. ಅವುಗಳನ್ನು ನೋಡಿ ಜನ ಕೇಕೆ ಹಾಕುತ್ತಾರೆ, ಚಪ್ಪಾಳೆ ತಟ್ಟುತ್ತಾ ಸ್ವಾಗತಿಸುತ್ತಾರೆ. ರಸ್ತೆ ಬದಿ ನಡೆದುಹೋಗುತ್ತಿದ್ದ ಮಕ್ಕಳು ಅನೆ ಬಂತೊಂದಾನೆ ಅಂತ ಹಾಡುವುದು ಕೇಳಿಸುತ್ತದೆ. ಇವತ್ತು ಆಗಮಿಸಿರುವ ಅನೆಗಳ ತೂಕ ಪರೀಕ್ಷೆ ಮಾಡಲಾಗುತ್ತದೆ, ನಂತರ ಅವುಗಳ ತೂಕಕ್ಕೆ ಅನುಗುಣವಾಗಿ ಪೌಷ್ಠಿಕ ಆಹಾರ ನೀಡಲಾಗುತ್ತದೆ.

ಮೈಸೂರು, ಆಗಸ್ಟ್ 25: ರಾಜ್ಯಾದ್ಯಂತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ ಜಂಬೂ ಸವಾರಿ ಪಾಲ್ಗೊಳ್ಳಲಿರುವ ಇನ್ನೂ ಐದು ಆನೆಗಳು ಇಂದು ನಗರದಲ್ಲಿರುವ ಅರಮನೆಗೆ ಅಗಮಿಸಿದವು. ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ, ಭೀಮನಕಟ್ಟೆಯಿಂದ ರೂಪಾ ಮತ್ತು ದುಬಾರೆ ಅನೆ ಶಿಬಿರದಿಂದ ಸುಗ್ರೀವ, ಗೋಪಿ ಮತ್ತು ಹೇಮಾವತಿ ಹೆಸರಿನ ಆನೆಗಳು ಇಂದು ಟ್ರಕ್ಕುಗಳಲ್ಲಿ ಬಂದವು. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆನೆಗಳಿಗೆ ವಿಶೇಷ ಪೂಜೆ ಮಾಡಿ ಒಳಗೆ ಕರೆದುಕೊಳ್ಳಲಾಯಿತು. ನಾವು ಈಗಾಗಲೇ ವರದಿ ಮಾಡಿರುವಂತೆ ಮೊದಲ ಬ್ಯಾಚ್​ನಲ್ಲಿ ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ 9 ಆನೆಗಳು ತಾಲೀಮು ಆರಂಭಿಸಿ ಎರಡು ವಾರ ಕಳೆದಿದೆ.

ಇದನ್ನೂ ಓದಿ:  ಮೈಸೂರು ದಸರಾ ಮಹೋತ್ಸವ: ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.