ಮೈಸೂರು ದಸರಾ ಮಹೋತ್ಸವ: ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭ
ಆನೆಗಳಿಗೆ ಕನಿಷ್ಠ 50 ದಿನಗಳ ತರಬೇತಿ ನೀಡಬೇಕಿರುವುದರಿಂದ ಅವುಗಳ ಆಯ್ಕೆ ಎರಡು ತಿಂಗಳು ಮೊದಲು ಶುರುವಾಗುತ್ತದೆ ಎಂದು ಪ್ರಭುಗೌಡ ಹೇಳುತ್ತಾರೆ. ಶಿಬಿರಗಳಿಂದ ಆಯ್ದ ಆನೆಗಳನ್ನು ಮೈಸೂರಿಗೆ ತಂದು ಆರೋಗ್ಯ ತಪಾಸಣೆ ಮಾಡಲಾಗುತ್ತದೆ, ಹೆಣ್ಣಾನೆಗಳ ಗರ್ಭಧರಿಸಿವೆಯಾ ಅನ್ನೋದನ್ನು ಪಶುವೈದ್ಯರು ಟೆಸ್ಟ್ ಮಾಡುತ್ತಾರೆ, ಸಿಡಿಮದ್ದಿನ ಶಬ್ದದಿಂದ ಹೆಣ್ಣಾನೆ ವಿಚಲಿತಗೊಂಡು ಗರ್ಭಾವಸ್ಥೆ ಮೇಲೆ ಪರಿಣಾಮ ಬೀರಬಾರದು ಎಂದು ಅರಣ್ಯಾಧಿಕಾರಿ ಹೇಳುತ್ತಾರೆ.
ಮೈಸೂರು, ಜುಲೈ 9: ನಾಡಿನ ಹಿರಿಮೆ ಗರಿಮೆಯಾಗಿರುವ ಜಗತ್ಪ್ರಸಿದ್ಧ ಮೈಸೂರು ದಸಾರ ಮಹೋತ್ಸವಕ್ಕೆ ಬಹಳ ದಿನಗಳೇನೂ ಉಳಿದಿಲ್ಲ. ಸಕಾಲದಲ್ಲಿ ಉತ್ತಮ ಮಳೆಯಾಗಿರುವುದರಿಂದ (good monsoon) ರಾಜ್ಯ ಸರ್ಕಾರ ಈ ಸಲದ ದಸರಾ ತ್ಸವವನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ದಸರಾ ಮಹೋತ್ಸವ ಮುಖ್ಯ ಆಕರ್ಷಣೆಯೆಂದರೆ ಜಂಬೂ ಸವಾರಿ ಮತ್ತು ಅದಕ್ಕಾಗಿ ಆನೆಗಳ ಅಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ನಮ್ಮ ಮೈಸೂರು ಪ್ರತಿನಿಧಿಯೊಂದಿಗೆ ಮಾತಾಡಿರುವ ಡಿಸಿಎಫ್ ಡಾ ಐಬಿ ಪ್ರಭುಗೌಡ ಹೇಳುತ್ತಾರೆ. ಆನೆಗಳನ್ನು ಆಯ್ಕೆಮಾಡಲು ಆರು ಆನೆ ಶಿಬಿರಗಳಿಗೆ ಭೇಟಿ ನೀಡಲಾಗಿದೆ, ಗಂಭೀರ ನಡಿಗೆ, ನೋಡಲು ಆಕರ್ಷಕ, ಜನಜಂಗುಳಿ ಮತ್ತು ಸಿಡಿಮದ್ದಿನ ಶಬ್ದಕ್ಕೆ ಹೆದರದ ಮತ್ತು ಮಾವುತನ ಕಮಾಂಡ್ಗಳನ್ನು ಪಾಲಿಸುವ ಆನೆಗಳನ್ನು ಅಯ್ಕೆ ಮಾಡಲಾಗುವುದು ಎಂದು ಪ್ರಭುಗೌಡ ಹೇಳುತ್ತಾರೆ.
ಇದನ್ನೂ ಓದಿ: Mysuru Dasara Mahotsav-2024: ಮೈಸೂರು ದಸರಾ….ಹಾಡು ಕೇಳುತ್ತಾ ಜಂಬೂ ಸವಾರಿ ನೋಡ್ತಿದ್ರೆ ನೋಸ್ಟಾಲ್ಜಿಕ್ ಅನುಭವ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

