Video: ಬ್ರೆಜಿಲ್ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ, ಅನಿವಾಸಿ ಭಾರತೀಯರ ಪ್ರೀತಿ ಅವಿಸ್ಮರಣೀಯ
ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಬ್ರೆಜಿಲ್ನ ರಾಜಧಾನಿ ಬ್ರೆಸಿಲಿಯಾಕೆ ತೆರಳಿದ್ದರು. ಅಲ್ಲಿ ಸಾಂಪ್ರದಾಯಿಕ ಸಾಂಬಾ ರೆಗ್ಗಿ ಗೀತೆಗಳ ಮೂಲಕ ಸ್ವಾಗತ, ಹೋಟೆಲ್ ತಲುಪಿದ ಬಳಿಕ ಶಿವ ತಾಂಡವ ಸ್ತೋತ್ರ ಪಠಣ, ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಲಾಯಿತು.ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅನಿವಾಸಿ ಭಾರತೀಯರು ಎಷ್ಟು ಭಾವನಾತ್ಮಕರು, ಅವರು ತಮ್ಮ ಬೇರುಗಳನ್ನು ಎಂದೂ ಮರೆತಿಲ್ಲ, ಭಾರತೀಯ ಸಮುದಾಯವು ಬ್ರೆಜಿಲ್ನಲ್ಲಿ ತೋರಿಸಿದ ಪ್ರೀತಿ ಅವಿಸ್ಮರಣೀಯ ಎಂದು ಬರೆದಿದ್ದಾರೆ. ಹಾಗೆಯೇ ಕಾರ್ಯಕ್ರಮದ ಹೈಲೈಟ್ ಎಂದು ವಿಡಿಯೋದ ತುಣುಕೊಂದನ್ನು ಹಾಕಿಕೊಂಡಿದ್ದಾರೆ. ಭಾರತ ಹಾಗೂ ಬ್ರೆಜಿಲ್ನ ಸ್ನೇಹ ದಿನಕಳೆದಂತೆ ಗಾಢವಾಗುತ್ತಾ ಹೋಗುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆ ಬಳಿಕ ಬ್ರೆಜಿಲ್ನ ರಾಜಧಾನಿ ಬ್ರೆಸಿಲಿಯಾಗೆ ತೆರಳಿದ್ದರು. ಅಲ್ಲಿ ಸಾಂಪ್ರದಾಯಿಕ ಸಾಂಬಾ ರೆಗ್ಗಿ ಗೀತೆಗಳ ಮೂಲಕ ಸ್ವಾಗತ ಕೋರಲಾಯಿತು, ಹೋಟೆಲ್ ತಲುಪಿದ ಬಳಿಕ ಶಿವ ತಾಂಡವ ಸ್ತೋತ್ರ ಪಠಣ, ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಲಾಯಿತು. ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅನಿವಾಸಿ ಭಾರತೀಯರು ಎಷ್ಟು ಭಾವನಾತ್ಮಕರು, ಅವರು ತಮ್ಮ ಬೇರುಗಳನ್ನು ಎಂದೂ ಮರೆತಿಲ್ಲ, ಭಾರತೀಯ ಸಮುದಾಯವು ಬ್ರೆಜಿಲ್ನಲ್ಲಿ ತೋರಿಸಿದ ಪ್ರೀತಿ ಅವಿಸ್ಮರಣೀಯ ಎಂದು ಬರೆದಿದ್ದಾರೆ. ಹಾಗೆಯೇ ಕಾರ್ಯಕ್ರಮದ ಹೈಲೈಟ್ ಎಂದು ವಿಡಿಯೋದ ತುಣುಕೊಂದನ್ನು ಹಾಕಿಕೊಂಡಿದ್ದಾರೆ. ಭಾರತ ಹಾಗೂ ಬ್ರೆಜಿಲ್ನ ಸ್ನೇಹ ದಿನಕಳೆದಂತೆ ಗಾಢವಾಗುತ್ತಾ ಹೋಗುತ್ತಿದೆ ಎಂದಿದ್ದಾರೆ.
ಇಲ್ಲಿಯವರೆಗೆ, ಅವರು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಅರ್ಜೆಂಟೀನಾಕ್ಕೆ ಭೇಟಿ ನೀಡಿದ್ದಾರೆ. ಅವರು ಪ್ರಸ್ತುತ ಬ್ರೆಜಿಲ್ ಪ್ರವಾಸದಲ್ಲಿದ್ದು ಇಲ್ಲಿಂದ ನಮೀಬಿಯಾಕ್ಕೆ ಹೋಗಲಿದ್ದಾರೆ. ವ್ಯಾಪಾರ, ರಕ್ಷಣೆ, ಇಂಧನ, ಬಾಹ್ಯಾಕಾಶ, ತಂತ್ರಜ್ಞಾನ, ಕೃಷಿ ಮತ್ತು ಆರೋಗ್ಯ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಧಾನಿ ಮೋದಿ ಮಂಗಳವಾರ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ

ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ಅವಕಾಶ ಮಿಸ್ ಆಗಿದ್ದು ಹೇಗೆ?

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
