ಮೈಸೂರು ದಸರಾ ಗಜಪಡೆಯಲ್ಲಿ ಗಮನ ಸೆಳೆಯುತ್ತಿವೆ ಬಂಡೀಪುರದ ಮೂರು ಆನೆಗಳು! ಏನಿವುಗಳ ವಿಶೇಷ?

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆ ಈಗಾಗಲೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮೈಸೂರಿಗೆ ತಲುಪಿದೆ. ಈ ಬಾರಿಯ ಗಜಪಡೆಯಲ್ಲಿ ಬಂಡೀಪುರದಿಂದ ಮೂರು ಆನೆಗಳು ಸಹ ಸೇರಿವೆ. ಈ ಆನೆಗಳ ವಿಶೇಷಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮೈಸೂರು ದಸರಾ ಗಜಪಡೆಯಲ್ಲಿ ಗಮನ ಸೆಳೆಯುತ್ತಿವೆ ಬಂಡೀಪುರದ ಮೂರು ಆನೆಗಳು! ಏನಿವುಗಳ ವಿಶೇಷ?
ಮೈಸೂರು ದಸರಾ ಗಜಪಡೆಯಲ್ಲಿ ಗಮನ ಸೆಳೆಯುತ್ತಿವೆ ಬಂಡೀಪುರದ ಆನೆಗಳು!
Follow us
| Updated By: ಗಣಪತಿ ಶರ್ಮ

Updated on:Aug 23, 2024 | 7:42 AM

ಚಾಮರಾಜನಗರ, ಆಗಸ್ಟ್​ 23: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆ ಮೈಸೂರಿಗೆ ತಲುಪಿದೆ. ಇದರಲ್ಲಿ ಬಂಡೀಪುರದ ರಾಮಪುರ ಆನೆ ಕ್ಯಾಂಪ್​​ನ ಮೂರು ಆನೆಗಳು ಸೇರಿವೆ. ಈ ಪೈಕಿ ಅತಿ ಕಿರಿಯ ಆನೆ ರೋಹಿತ ಕೂಡ ಸೇರಿದೆ. ಕೇವಲ 22 ವರ್ಷದ ಪ್ರಾಯದ ರೋಹಿತ ಆನೆ ಶಿಸ್ತಿನ ಸಿಪಾಯಿ. ಉಳಿದಂತೆ ಹಿರಣ್ಯ, ಲಕ್ಷ್ಮೀ ಎಂಬ ಎರೆಡು ಹೆಣ್ಣಾನೆಗಳು ಕೂಡ ದಸರಾದಲ್ಲಿ ಪಾಲ್ಗೊಳ್ಳಲು ಅಭಿಮನ್ಯು ತಂಡದ ಜತೆಗೂಡಿವೆ.

2001 ರಲ್ಲಿ ತನ್ನ ತಾಯಿಂದ ಬೇರೆಯಾದ ರೋಹಿತ ಆನೆ ಹೆಡಿಯಾಲ ಅರಣ್ಯದಲ್ಲಿ ಒಂಟಿಯಾಗಿ ತಿರುಗಾಡುವಾಗ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದ್ದ. ಆಗ ರೋಹಿತನಿಗೆ ಕೇವಲ 6 ತಿಂಗಳಷ್ಟೇ. ಆಗಿನಿಂದ ಬಂಡೀಪುರ ಆನೆ ಕ್ಯಾಂಪ್​​ನಲ್ಲಿ ರೋಹಿತನಿಗೆ ತರಬೇತಿ ನೀಡಲಾಗಿದ್ದು, 2001 ರಿಂದ ರೋಹಿತ ಕಾಡಿನಿಂದ ನಾಡಾನೆಯಾಗಿ ಬದಲಾಗಿದ್ದ.

ಶಿಸ್ತಿನ ಸಿಪಾಯಿ

ಮಾವುತ ಹೇಳುವ ಮಾತನ್ನು ಯಥಾವತ್ತಾಗಿ ಪಾಲಿಸುವ ಈ ರೋಹಿತ ಈಗ ಬರೋಬ್ಬರಿ 2.70 ಮೀಟರ್ ಎತ್ತರವಿದ್ದು 3200 ಕೆಜಿ ತೂಕವಿದೆ. ಇದರ ದಂತ ಭಾರಿ ಆಕರ್ಷಕವಾಗಿದ್ದು ಮುಂಬರುವ ದಸಾರಗಳಲ್ಲಿ ಅಂಬಾರಿ ಹೊರುವ ಎಲ್ಲ ಗುಣ ಲಕ್ಷಣಗಳು ಈ ರೋಹಿತ ಹೊಂದಿದ್ದಾನೆ.

ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿರುವ ಮೈಸೂರು ದಸರಾ ಗಜಪಡೆ

ರೋಹಿತನ ಜತೆ ಲಕ್ಷ್ಮೀ ಹಾಗೂ ಹಿರಣ್ಯ ಕೂಡ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು ನಿಶಾನೆ ಆನೆಯಾಗಿ ಈ ಮೂರು ಆನೆಗಳನ್ನ ಬಳಸಿಕೊಳ್ಳುವ ಸಾದ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:40 am, Fri, 23 August 24