ಒತ್ತುವರಿ ತೆರವು ಕಾರ್ಯಾಚರಣೆ: ಯಲಹಂಕ ನ್ಯೂ ಟೌನಲ್ಲಿ ಅಪಾರ್ಟ್​ಮೆಂಟ್​ವೊಂದರ ಸೆಕ್ಯುರಿಟಿ ಗಾರ್ಡ್​ಗಳಿಂದ ತೀವ್ರ ಪ್ರತಿರೋಧ!

ಯಲಹಂಕ ನ್ಯೂ ಟೌನ್ ಎನ್ ಸಿ ಬಿಎಸ್ ವಸತಿ ಸಮುಚ್ಛಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಭಾಗವನ್ನು ತೆರವು ಮಾಡಲು ಹೋದಾಗ ಗೇಟ್ ಬಳಿಯ ಗಾರ್ಡ್​ಗಳು ಜೆಸಿಬಿಯನ್ನು ಒಳಗಡೆ ಬರಲು ಬಿಡದೆ ಸುಮಾರು ಸಮಯದವರೆಗೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

TV9kannada Web Team

| Edited By: Arun Belly

Sep 13, 2022 | 2:03 PM

ಬೆಂಗಳೂರು: ಬಿಬಿಎಮ್ ಪಿ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ನಗರದ ನಾನಾ ಭಾಗಗಳಲ್ಲಿ ತಲೆಯೆತ್ತಿರುವ ಆಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಆದರೆ ಕಾರ್ಯಾಚರಣೆಗೆ ನಿವಾಸಿಗಳಿಂದ, ಅಪಾರ್ಟ್ಮೆಂಟ್ ಗಳ ಸೆಕ್ಯರಿಟಿ ಗಾರ್ಡ್ ಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಯಲಹಂಕ ನ್ಯೂ ಟೌನ್ ಎನ್ ಸಿ ಬಿಎಸ್ ವಸತಿ ಸಮುಚ್ಛಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಭಾಗವನ್ನು ತೆರವು ಮಾಡಲು ಹೋದಾಗ ಗೇಟ್ ಬಳಿಯ ಗಾರ್ಡ್​ಗಳು ಜೆಸಿಬಿಯನ್ನು ಒಳಗಡೆ ಬರಲು ಬಿಡದೆ ಸುಮಾರು ಸಮಯದವರೆಗೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

Follow us on

Click on your DTH Provider to Add TV9 Kannada