ಸಂಸದ ಡಾ ಉಮೇಶ್ ಜಾಧವ್ ಗೆ ಕಲಬುರಗಿ ವಿಮಾನ ನಿಲ್ದಾಣದೊಳಗೆ ಪ್ರವೇಶ ನಿರಾಕರಿಸಲಾಯಿತು!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Sep 26, 2022 | 12:01 PM

ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಏರ್ ಲಿಫ್ಟ್ ಮಾಡುವ ಸಂದರ್ಭದಲ್ಲಿ ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ ವಿಮಾನ ನಿಲ್ದಾಣದೊಳಗೆ ಹೋಗಬೇಕೆಂದಾಗ ಪೊಲೀಸರು ಅವರಿಗೆ ಅವಕಾಶ ನೀಡಲಿಲ್ಲ.

ಕಲಬುರಗಿ: ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಭದ್ರತೆ ಬಹಳ ಪ್ರಮುಖ ಅಂಶ ಮತ್ತು ಅದನ್ನು ಕಟ್ಟುನಿಟ್ಟಿನಿಂದ ಪಾಲಿಸಲಾಗುತ್ತದೆ ಎಂದು ಕಲಬುರಗಿ ವಿಮಾನ ನಿಲ್ದಾಣದ (Kalaburagi airport) ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರು ಸೋಮವಾರ ತೋರಿಸಿದರು. ನಾವು ಈಗಾಗಲೇ ವರದಿ ಮಾಡಿರುವಂತೆ ಮಹಾರಾಷ್ಟ್ರದ ಉಮ್ಮರ್ಗ ಬಳಿ ಗಾಂಜಾ ದಂಧೆಯಲ್ಲಿ ತೊಡಗಿರುವವರು ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಶ್ರೀಮಂತ ಇಲ್ಲಾಳ್ (Srimanth Illal) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಏರ್ ಲಿಫ್ಟ್ ಮಾಡುವ ಸಂದರ್ಭದಲ್ಲಿ ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ (Dr Umesh Jadhav) ವಿಮಾನ ನಿಲ್ದಾಣದೊಳಗೆ ಹೋಗಬೇಕೆಂದಾಗ ಪೊಲೀಸರು ಅವರಿಗೆ ಅವಕಾಶ ನೀಡಲಿಲ್ಲ.

Loading...
Unable to load recommendations.
Follow Us
TV9 Web

TV9 Kannada

Read More