ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ

Updated on: Mar 03, 2026 | 12:48 PM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಅಮೆರಿಕ ಸೇನೆಯು ಹಲವಾರು ದಿನಗಳಿಂದ ಇರಾನ್ ಮೇಲೆ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಆದಾಗ್ಯೂ, ಈ ಯುದ್ಧದ ಮಧ್ಯೆ, ಟ್ರಂಪ್‌ಗೆ ಸಂಬಂಧಿಸಿದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.ಮಾಹಿತಿಯ ಪ್ರಕಾರ, ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರಂಪ್ ಟವರ್‌ನಲ್ಲಿ ಅನುಮಾನಾಸ್ಪದ ಬಾಕ್ಸ್​​ ಪತ್ತೆಯಾಗಿದೆ. ಟ್ರಂಪ್ ಟವರ್‌ನಿಂದ ಸೀಕ್ರೆಟ್ ಸರ್ವಿಸ್ ಈ ಪ್ಯಾಕ್ ಅನ್ನು ವಶಪಡಿಸಿಕೊಂಡಿದೆ.

ವಾಷಿಂಗ್ಟನ್, ಮಾರ್ಚ್​ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಅಮೆರಿಕ ಸೇನೆಯು ಹಲವಾರು ದಿನಗಳಿಂದ ಇರಾನ್ ಮೇಲೆ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಆದಾಗ್ಯೂ, ಈ ಯುದ್ಧದ ಮಧ್ಯೆ, ಟ್ರಂಪ್‌ಗೆ ಸಂಬಂಧಿಸಿದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.ಮಾಹಿತಿಯ ಪ್ರಕಾರ, ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರಂಪ್ ಟವರ್‌ನಲ್ಲಿ ಅನುಮಾನಾಸ್ಪದ ಬಾಕ್ಸ್​​ ಪತ್ತೆಯಾಗಿದೆ. ಟ್ರಂಪ್ ಟವರ್‌ನಿಂದ ಸೀಕ್ರೆಟ್ ಸರ್ವಿಸ್ ಈ ಪ್ಯಾಕ್ ಅನ್ನು ವಶಪಡಿಸಿಕೊಂಡಿದೆ.

ಸೋಮವಾರ ಮಧ್ಯಾಹ್ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಸಿದ್ಧ ಟ್ರಂಪ್ ಟವರ್‌ನ ಮೇಲ್ ಕೋಣೆಯಲ್ಲಿ ಅನುಮಾನಾಸ್ಪದ ಪ್ಯಾಕ್ ಕಂಡುಬಂದಿದೆ.ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ (NYPD) ಬಾಂಬ್ ಸ್ಕ್ವಾಡ್ ಕೂಡಲೇ ಅದನ್ನು ವಶಪಡಿಸಿಕೊಂಡಿದೆ. 725 ಫಿಫ್ತ್ ಅವೆನ್ಯೂದಲ್ಲಿರುವ ಕಟ್ಟಡದೊಳಗೆ ಬಾಕ್ಸ್​ ಪತ್ತೆಯಾದ ನಂತರ ಸೀಕ್ರೆಟ್ ಸರ್ವಿಸ್ 911 ಗೆ ಕರೆ ಮಾಡಲಾಗಿತ್ತು. ತನಿಖೆಯ ಸಮಯದಲ್ಲಿ ಯಾರನ್ನೂ ಕಟ್ಟಡದಿಂದ ಸ್ಥಳಾಂತರಿಸಲಾಗಿಲ್ಲ, ಅಥವಾ ಯಾವುದೇ ಗಾಯಗಳೂ ಆಗಿಲ್ಲ, ಯಾರನ್ನೂ ಬಂಧಿಸಲಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More