Video: ಧುರಂಧರ್-2 ಎಫೆಕ್ಟ್​, ಪಾಕಿಸ್ತಾನದ ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳಿಗಾಗಿ ಹುಡುಕಾಟ?

Updated on: Mar 24, 2026 | 12:20 PM

ಬಾಲಿವುಡ್ ಸಿನಿಮಾ ದುರಂಧರ್ 2 ಯುಗಾದಿಯಂದು ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ಪಾತ್ರಧಾರಿ ಭಾರತದ ಸೀಕ್ರೆಟ್ ಏಜೆಂಟ್ ಆಗಿದ್ದು, ತನ್ನ ಹೆಸರನ್ನು ಹಮ್ಜಾ ಅಲಿ ಮಜಾರಿ ಎಂದು ಬದಲಿಸಿಕೊಂಡು ಪಾಕಿಸ್ತಾನದಲ್ಲಿ ನೆಲೆಸಿ, ಅಲ್ಲಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಸಿನಿಮಾವನ್ನು ನೋಡಿದ ಪಾಕಿಸ್ತಾನಿ ಪೊಲೀಸರು ಹಾಗೂ ಸ್ಥಳೀಯರು ಕರಾಚಿಯ ಲಿಯಾರಿಯ ಪ್ರತಿ ಬೀದಿಯಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳ ಹುಡುಕಾಟದಲ್ಲಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಪ್ರಮುಖವಾಗಿ ಹಮ್ಜಾ ಅಲಿ ಮಜಾರಿ ಎಂದ ಒಂದೇ ಹೆಸರಿನ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ.

ಇಸ್ಲಾಮಾಬಾದ್, ಮಾರ್ಚ್​ 24: ಬಾಲಿವುಡ್ ಸಿನಿಮಾ ಧುರಂಧರ್ 2 ಯುಗಾದಿಯಂದು ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ಪಾತ್ರಧಾರಿ ಭಾರತದ ಸೀಕ್ರೆಟ್ ಏಜೆಂಟ್ ಆಗಿದ್ದು, ತನ್ನ ಹೆಸರನ್ನು ಹಮ್ಜಾ ಅಲಿ ಮಜಾರಿ ಎಂದು ಬದಲಿಸಿಕೊಂಡು ಪಾಕಿಸ್ತಾನದಲ್ಲಿ ನೆಲೆಸಿ, ಅಲ್ಲಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಸಿನಿಮಾವನ್ನು ನೋಡಿದ ಪಾಕಿಸ್ತಾನಿ ಪೊಲೀಸರು ಹಾಗೂ ಸ್ಥಳೀಯರು ಕರಾಚಿಯ ಲಿಯಾರಿಯ ಪ್ರತಿ ಬೀದಿಯಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳ ಹುಡುಕಾಟದಲ್ಲಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಆದರೆ ಈ ಎಲ್ಲಾ ವಿಡಿಯೋ ಫೇಕ್ ಎಂದು ಹೇಳಲಾಗುತ್ತಿದೆ. ಪ್ರತಿ ವರ್ಷವೂ ಇಂಥಾ ಕಾರ್ಯಾಚರಣೆಗಳು ನಡೆಯುತ್ತಿವೆ ಆದರೆ ಸಿನಿಮಾಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಲಾಗಿದೆ.

 

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 24, 2026 11:49 AM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More