ದುಬೈ ಪ್ರವಾಸದಲ್ಲಿರುವ ಡಿ.ಕೆ ಶಿವಕುಮಾರ್ ಅವರ ಫೋಟೋಗಳು ಇಲ್ಲಿದೆ ನೋಡಿ
ದುಬೈ ಪ್ರವಾಸದಲ್ಲಿರುವ ಡಿ.ಕೆ. ಶಿವಕುಮಾರ್ ಫೋಟೋಶೂಟ್ ಮಾಡಿದ್ದಾರೆ. ಇದಕ್ಕೆ ಶಾಸಕ ಎನ್.ಎ ಹ್ಯಾರಿಸ್ ಸಾಥ್ ನೀಡಿದ್ದಾರೆ.
ಬೆಂಗಳೂರು: ಬಿಜಿನೆಸ್ ಮೀಟ್ ಸಂಬಂಧವಾಗಿ ದುಬೈಗೆ ತೆರಳಿರುವ ಡಿ.ಕೆ. ಶಿವಕುಮಾರ್ ದುಬೈನ ಮ್ಯೂಸಿಯಂ ಆಫ್ ಫ್ಯೂಚರ್ಗೆ ಭೇಟಿ ನೀಡಿದ್ದಾರೆ. ಇದರ ಜೊತೆಗೆ ಫೋಟೋಶೂಟ್ ಕೂಡ ಮಾಡಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ಗೆ ಶಾಸಕ ಎನ್.ಎ ಹ್ಯಾರಿಸ್ ಸಾಥ್ ನೀಡಿದ್ದಾರೆ. ಡಿಸೆಂಬರ್ 1 ರಿಂದ 8 ರತನಕ ವಿವಿಧ ಕಾರ್ಯಕ್ರಮಗಳು, ಬಿಜಿನೆಸ್ ಮೀಟ್ ಭಾಗಿಯಾಗಬೇಕಿರುವ ಕಾರಣಕ್ಕೆ ದುಬೈಗೆ ತೆರಳಲು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ನವೆಂಬರ್ 23 ರಂದು ದೆಹಲಿಯ ಇಡಿ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಷರತ್ತುಬದ್ದ ಅವಕಾಶವನ್ನು ಪಡೆದುಕೊಂಡಿದ್ದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ