ಬಳ್ಳಾರಿ ಜೈಲಲ್ಲಿ ಎಲ್ಲ ಸಿಗುತ್ತೆ, ದರ್ಶನ್ನ ತಿಹಾರ್ಗೆ ಕಳಿಸಿಬಿಡಿ: ಮಾಜಿ ಕೈದಿ ಸಿಗ್ಲಿ ಬಸ್ಯ
ದರ್ಶನ್ ಅವರಿಗೆ ಬಳ್ಳಾರಿ ಜೈಲು ಸುರಕ್ಷಿತವಲ್ಲ, ಅಲ್ಲೂ ಸಹ ಇತರೆ ಜೈಲುಗಳಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಹಾಗಾಗಿ ದರ್ಶನ್ ಅನ್ನು ತಿಹಾರ್ ಜೈಲಿಗೆ ಕಳಿಸಿಬಿಟ್ಟರೆ ಅಲ್ಲಿ ಸುರಕ್ಷಿತವಾಗಿರುತ್ತಾರೆ ಎಂದು ಕುಖ್ಯಾತ ಕಳ್ಳ, ಬಳ್ಳಾರಿ ಜೈಲಿನ ಮಾಜಿ ಕೈದಿ ಸಿಗ್ಲಿ ಬಸ್ಯ ಸಲಹೆ ನೀಡಿದ್ದಾನೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ದೊರೆತು ವಿವಆದವಾದ ಬೆನ್ನಲ್ಲೆ ದರ್ಶನ್ ಅನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲು ದರ್ಶನ್ಗೆ ಸುರಕ್ಷಿತವಲ್ಲ ಅಲ್ಲೂ ಸಹ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂದು ಮಾಜಿ ಕೈದಿಗಳು ಕೆಲವರು ಹೇಳಿದ್ದಾರೆ. ಈ ಹಿಂದೆ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿರುವ ಕುಖ್ಯಾತ ಕೈದಿ ಸಿಗ್ಲಿ ಬಸ್ಯ, ಟಿವಿ9 ಜೊತೆಗೆ ಮಾತನಾಡಿದ್ದು, ಬಳ್ಳಾರಿ ಜೈಲಿನಲ್ಲಿ ಸಿಗರೇಟು, ಮದ್ಯ ಎಲ್ಲವೂ ಸಿಗುತ್ತದೆ. ಪೊಲೀಸರ ನಿಗಾವಣೆಯಲ್ಲಿಯೇ ಎಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂದಿದ್ದು, ದರ್ಶನ್ ಅನ್ನು ತಿಹಾರ್ ಜೈಲಿಗೆ ಸ್ಥಳಾಂತರ ಮಾಡಿಬಿಟ್ಟರೆ ಅಲ್ಲಷ್ಟೆ ದರ್ಶನ್ ಸುರಕ್ಷಿತವಾಗಿ ಇರಬಹುದು ಎಂದಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 29, 2024 05:26 PM