AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನ ವಿಜಯ್ ಗೆ ಶ್ರದ್ಧಾಂಜಲಿ: ವಿಜಯ ರಾಘವೇಂದ್ರರನ್ನು ಪ್ರಿಯಾಂಕಾ ಉಪೇಂದ್ರ ಹಿರಿಯಕ್ಕನ ಹಾಗೆ ಸಂತೈಸಿದರು

ಸ್ಪಂದನ ವಿಜಯ್ ಗೆ ಶ್ರದ್ಧಾಂಜಲಿ: ವಿಜಯ ರಾಘವೇಂದ್ರರನ್ನು ಪ್ರಿಯಾಂಕಾ ಉಪೇಂದ್ರ ಹಿರಿಯಕ್ಕನ ಹಾಗೆ ಸಂತೈಸಿದರು

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Aug 09, 2023 | 12:35 PM

Share

ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ಸೋಮವಾರ ಬೆಳಗಿನ ಜಾವ ಬ್ಯಾಂಕಾಕ್ ನ ಹೋಟೆಲೊಂದರ ಕೋಣೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಅಕಾಲಿಕ ಮರಣಕ್ಕೀಡಾದರು. ಅವರ ಅಂತಿಮ ಸಂಸ್ಕಾರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.

ಬೆಂಗಳೂರು: ಸ್ಪಂದನ ವಿಜಯ್ ಅಂತಿಮ ದರ್ಶನಕ್ಕೆ ಆಗಮಿಸಿದ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ-ನಟ ಉಪೇಂದ್ರ ಅವರ ಪತ್ನಿ ಹಾಗೂ ನಟಿ ಪ್ರಿಯಾಂಕ ಉಪೇಂದ್ರ, ದುಃಖದ ಮಡುವಿನಲ್ಲಿರುವ ವಿಜಯರಾಘವೇಂದ್ರರನ್ನು ಸಂತೈಸಿರುವ ದೃಶ್ಯ ದೂರದಲ್ಲಿ ಕೂತು ಈ ವಿಡಿಯೋ ವೀಕ್ಷಿಸುತ್ತಿರುವವರ ಕಣ್ಣನ್ನೂ ತೇವಗೊಳಿಸುತ್ತದೆ. ಬಿಕ್ಕಿ ಬಿಕ್ಕಿ ಅಳುತ್ತಾ ವಿಜಯ್ ಬಳಿ ಹೋಗುವ ಪ್ರಿಯಾಂಕಾ ಒಬ್ಬ ಹಿರಿಯ ಸಹೋದರಿಯಂತೆ ಸಾಂತ್ವನ ಹೇಳುತ್ತಾರೆ. ಎರಡು ಸಲ ತಬ್ಬಿಕೊಂಡು ಸಂತೈಸುತ್ತಾರೆ. ನಂತರ ಪ್ರಿಯಾಂಕಾ ವಿಜಯ್ ಪಕ್ಕದಲ್ಲಿ ಕುಳಿತಿದ್ದ ಎಸ್ ಎ ಚಿನ್ನೇಗೌಡರ ಪಾದಮುಟ್ಟಿ ನಮಸ್ಕರಿಸುತ್ತಾರೆ. ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ಸೋಮವಾರ ಬೆಳಗಿನ ಜಾವ ಬ್ಯಾಂಕಾಕ್ ನ ಹೋಟೆಲೊಂದರ ಕೋಣೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಅಕಾಲಿಕ ಮರಣಕ್ಕೀಡಾದರು. ಅವರ ಅಂತಿಮ ಸಂಸ್ಕಾರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 09, 2023 12:35 PM

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.