Assembly Polls: ಕೊರಟಗೆರೆಯಲ್ಲಿ ಬೆಂಬಲಿಗರೊಂದಿಗೆ ಕುಣಿದ ಹಿರಿಯ ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ್!
ಕನ್ನಡಿಗರಿಗೆಲ್ಲ ಗೊತ್ತಿರುವ ಹಾಗೆ ಪರಮೇಶ್ವರ್ ಗಂಭೀರ ಸ್ವರೂಪದ ರಾಜಕಾರಣಿ. ಆದರೆ, ತಾಳಬದ್ಧವಾಗಿ ಕುಣಿಯುವುದನ್ನು ನೋಡುತ್ತಿದ್ದರೆ ಕುಣಿತ ಅವರಿಗೆ ಹೊಸದು ಅಂತ ಅನಿಸದು.
ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ (Assembly polls) ಮುಗಿದು ಹೊಸ ಸರ್ಕಾರ ರಚನೆ ಅಗುವವರೆಗೆ ಇಂಥ ದೃಶ್ಯಗಳು ಸಾಮಾನ್ಯವೆನಿಸಲಿವೆ. ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಪ್ರಚಾರದ ಸಮಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕುಣಿಯುತ್ತಾರೆ. ಹಾಗಂತ ಎಲ್ಲ ನಾಯಕರು ಡ್ಯಾನ್ಸ್ ಮಾಡೋದಿಲ್ಲ. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಡಾ ಜಿ ಪರಮೇಶ್ವರ್ (Dr G Parameshwar) ಅವರು ಕ್ಷೇತ್ರದ ಚಿಕ್ಕನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಕುಣಿದಿದ್ದು ಆಶ್ಚರ್ಯ ಮೂಡಿಸುತ್ತದೆ. ಯಾಕೆಂದರೆ ಕನ್ನಡಿಗರಿಗೆಲ್ಲ ಗೊತ್ತಿರುವ ಹಾಗೆ ಪರಮೇಶ್ವರ್ ಗಂಭೀರ ಸ್ವರೂಪದ ರಾಜಕಾರಣಿ (serious type politician). ಆದರೆ, ತಾಳಬದ್ಧವಾಗಿ ಕುಣಿಯುವುದನ್ನು ನೋಡುತ್ತಿದ್ದರೆ ಕುಣಿತ ಅವರಿಗೆ ಹೊಸದು ಅಂತ ಅನಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos