Assembly Polls | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್ನಲ್ಲಿರುವ 10 ಜನರಲ್ಲಿ ನಾನೂ ಒಬ್ಬ: ಡಾ ಜಿ ಪರಮೇಶ್ವರ್
ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಪಾಸಿಟಿವ್ ವೈಬ್ ವ್ಯಕ್ತವಾಗುತ್ತಿವೆ, ಎಲ್ಲ ಸಮೀಕ್ಷೆಗಳಲ್ಲಿ ತಮ್ಮ ಪಕ್ಷವೇ ಮುಂದಿದೆ, 113ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರೋದು ಖಚಿತ ಎಂದು ಪರಮೇಶ್ವರ್ ಹೇಳಿದರು.
ತುಮಕೂರು: ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ (Dr G Parameshwar) ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಸ್ಸಂದೇಹವಾಗಿ ಮುಖ್ಯಮಂತ್ರಿ ರೇಸ್ ನಲ್ಲಿರುವವರ ಪೈಕಿ ಮುಂಚೂಣಿಯಲ್ಲಿರುತ್ತಾರೆ (forefront). ಆದರೆ ತಮ್ಮ ಪಕ್ಷದಲ್ಲಿ, ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವ ಪರಿಪಾಠ ಇಲ್ಲ, ಅವತ್ತಿನ ಸಂದರ್ಭಕ್ಕೆ ಯಾರು ಹೆಚ್ಚು ಸೂಕ್ತ ಅನಿಸುತ್ತಾರೋ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು. ಜಿಲ್ಲೆಯ ಮಧುಗಿರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಪಾಸಿಟಿವ್ ವೈಬ್ (positive vibe) ವ್ಯಕ್ತವಾಗುತ್ತಿವೆ, ಎಲ್ಲ ಸಮೀಕ್ಷೆಗಳಲ್ಲಿ ತಮ್ಮ ಪಕ್ಷವೇ ಮುಂದಿದೆ, 113ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರೋದು ಖಚಿತ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 16, 2023 11:40 AM
Latest Videos