Police Action: ಬುಧವಾರ ರಾತ್ರಿ ಕಾರ್ಯಾಚರಣೆಗಿಳಿದ ಕೋಲಾರ ಪೊಲೀಸರು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಟ್ಟೆಚ್ಚರ!
ಕೋಲಾರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಮ್ ನಾರಾಯಣ ರಾತ್ರಿ ನಡೆಸಿದ ಕಾರ್ಯಾಚರಣೆ ಮತ್ತು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಕೋಲಾರ: ವಿಧಾನಸಭಾ ಚುನಾವಣೆ ಹತ್ತಿರಗೊಳ್ಳುತ್ತಿರುವಂತೆಯೇ ಕೋಲಾರ ಜಿಲ್ಲೆಯ ಪೊಲೀಸರು ರೌಡಿ ಶೀಟರ್, ತಂಟೆಕೋರರು, ಅನಗತ್ಯವಾಗಿ ರಾತ್ರಿ ಸಮಯ ಓಡಾಡುವವರ ಮೇಲೆ ಕಟ್ಟೆಚ್ಚರವಹಿಸಿದ್ದಾರೆ. ಕೇಂದ್ರವಲಯ ಐಜಿಪಿ ರವಿಕಾಂತೇ ಗೌಡ (BR Ravikanthe Gowda) ಮತ್ತು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (Alok Kumar) ಅವರ ನಿರ್ದೇಶನದ ಮೇರೆಗೆ ಕಳೆದ ರಾತ್ರಿ ಕೋಲಾರ ನಗರ ಪೊಲೀಸರು 25 ಕ್ಕೂ ಹೆಚ್ಚು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಿದ್ದಾರೆ. ನಗರದ ರೌಡಿ ಶೀಟರ್ ಗಳನ್ನು ಠಾಣೆಗಳಿಗೆ ಕರೆದೊಯ್ದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಿರುವಂತೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಮ್ ನಾರಾಯಣ (M Narayana) ರಾತ್ರಿ ನಡೆಸಿದ ಕಾರ್ಯಾಚರಣೆ ಮತ್ತು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
om/@tv9kannada/videos
Latest Videos