Video: ‘ಇಂಡಿಯಾ’ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ

Updated on: May 16, 2025 | 12:49 PM

ಇಂಡಿಯಾ ಮೈತ್ರಿಕೂಟದ ಪ್ರಸ್ತುತ ಸ್ಥಿತಿ ಬಗ್ಗೆ ಕಾಂಗ್ರೆಸ್​ ನಾಯಕ ಪಿ ಚಿದಂಬರಂ(P Chidambaram) ಕಳವಳ ವ್ಯಕ್ತಪಡಿಸಿದ್ದಾರೆ. ಮೈತ್ರಿಕೂಟದ ಒಗ್ಗಟ್ಟು ಹಾಗೆಯೇ ಇದೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲ ಎನ್ನುವ ಹೇಳಿಕೆಯು,  ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆಯೇ ಎನ್ನುವ ಅನುಮಾನ ಹುಟ್ಟುಹಾಕಿದೆ.2024ರ ಲೋಕಸಭಾ ಚುನಾವಣೆಗೂ ಮುನ್ನ ವಿರೋಧಪಕ್ಷಗಳೆಲ್ಲಾ ಒಟ್ಟಾಗಿ ಮೈತ್ರಿಕೂಟ ರಚಿಸಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು ಆದರೂ ಪ್ರಧಾನಿ ಮೋದಿಯೇ ಮತ್ತೆ ಪ್ರಧಾನಿಯಾದರು

ನವದೆಹಲಿ, ಮೇ 16: ಇಂಡಿಯಾ ಮೈತ್ರಿಕೂಟದ ಪ್ರಸ್ತುತ ಸ್ಥಿತಿ ಬಗ್ಗೆ ಕಾಂಗ್ರೆಸ್​ ನಾಯಕ ಪಿ ಚಿದಂಬರಂ(P Chidambaram) ಕಳವಳ ವ್ಯಕ್ತಪಡಿಸಿದ್ದಾರೆ. ಮೈತ್ರಿಕೂಟದ ಒಗ್ಗಟ್ಟು ಹಾಗೆಯೇ ಇದೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲ ಎನ್ನುವ ಹೇಳಿಕೆಯು,  ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆಯೇ ಎನ್ನುವ ಅನುಮಾನ ಹುಟ್ಟುಹಾಕಿದೆ.

2024ರ ಲೋಕಸಭಾ ಚುನಾವಣೆಗೂ ಮುನ್ನ ವಿರೋಧಪಕ್ಷಗಳೆಲ್ಲಾ ಒಟ್ಟಾಗಿ ಮೈತ್ರಿಕೂಟ ರಚಿಸಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು ಆದರೂ ಪ್ರಧಾನಿ ಮೋದಿಯೇ ಮತ್ತೆ ಪ್ರಧಾನಿಯಾದರು.
ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಮೃತ್ಯುಂಜಯ್ ಸಿಂಗ್ ಯಾದವ್ ಬರೆದಿರುವ ‘ಕಂಟೆಸ್ಟಿಂಗ್ ಡೆಮೋಕ್ರೆಟಿಕ್ ಡೆಫಿಸಿಟ್ ‘ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಿದಂಬರಂ ಮಾತನಾಡುತ್ತಿದ್ದರು. ಇಂಡಿಯಾ ಮೈತ್ರಿಕೂಟದ ಭವಿಷ್ಯ ಉಜ್ವಲವಾಗಿದೆ ಎನಿಸುತ್ತಿಲ್ಲ ಎಂದು ಅವರು ಹೇಳಿದರು.

ಮೈತ್ರಿ ದುರ್ಬಲಗೊಂಡಿದೆ, ಇಂಡಿಯಾ ಮೈತ್ರಿಕೂಟದ ಭವಿಷ್ಯವು ಮೃತ್ಯುಂಜಯ್ ಸಿಂಗ್ ಯಾದವ್ ಹೇಳಿದಂತೆ ಉಜ್ವಲವಾಗಿಲ್ಲ. ಮೈತ್ರಿ ಇನ್ನೂ ಹಾಗೆಯೇ ಇದೆ ಎಂದು ಅವರು ಭಾವಿಸುತ್ತಾರೆ, ಆದರೆ ನನಗೆ ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಇಂಡಿಯಾ ಮೈತ್ರಿಕೂಟದ ಮಾತುಕತೆ ತಂಡದ ಭಾಗವಾಗಿದ್ದ ಸಲ್ಮಾನ್ (ಖುರ್ಷಿದ್) ಮಾತ್ರ ಉತ್ತರಿಸಬಲ್ಲರು ಎಂದಿದ್ದಾರೆ. ಮೈತ್ರಿ ಸಂಪೂರ್ಣವಾಗಿ ಹಾಗೆಯೇ ಉಳಿದರೆ, ನನಗೆ ತುಂಬಾ ಸಂತೋಷವಾಗುತ್ತದೆ. ಆದರೆ ಅದು ದುರ್ಬಲಗೊಂಡಂತೆ ಕಾಣುತ್ತದೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 16, 2025 12:48 PM