ಹಿರಿಯ ಕಾಂಗ್ರೆಸ್ ನಾಯಕ ಶಿವಶಂಕರ್ ರೆಡ್ಡಿ ಬಿಜೆಪಿ ಸೇರಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆಯೇ? ಅವರ ಮಾತಿನಿಂದ ಅನುಮಾನ ಹುಟ್ಟುತ್ತದೆ!
ಸಿದ್ದರಾಮಯ್ಯ ಬದಲಾಗಿದ್ದಾರೆ, ಈಗ ಅವರು 2013ರಲ್ಲಿದ್ದಂತೆ ಇಲ್ಲ, ಸಾಕಷ್ಟು ಬದಲಾವಣೆಯಾಗಿದೆ. ಪರಿಸ್ಥಿತಿಯ ಕೈಗೊಂಬೆ ಆಗಿರಲೂಬಹುದು ಎನ್ನುತ್ತಾರೆ. ಶಿವಕುಮಾರ್ ಅವರನ್ನು ನೇರ ಮಾತಿನ ರಾಜಕಾರಣಿ ಎನ್ನುವ ರೆಡ್ಡಿ ತಮಗೆ ಟಿಕೆಟ್ ಸಿಗದಿರಬಹುದಾದ ಕಾರಣಕ್ಕೆ ರಾಜ್ಯ ನಾಯಕರನ್ನು ದೂರುತ್ತಾರೆ.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಹಿಂದೊಮ್ಮೆ ಉಪ ಸಭಾಧ್ಯಾಕ್ಷ ಕೂಡ ಆಗಿದ್ದ ಶಿವಶಂಕರ ರೆಡ್ಡಿಯವರಿಗೆ (Shivshankar Reddy) ಬಿಜೆಪಿ ನಾಯಕರು ಗಾಳ ಹಾಕುತ್ತಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ರೆಡ್ಡಿಯವರೊಂದಿಗೆ ಹಿರಿಯ ಬಿಜೆಪಿ ನಾಯಕರೊಬ್ಬರು ಮಾತಾಡಿರುವ ಬೆನ್ನಲ್ಲೇ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ತಮ್ಮ ಆಸಮಾಧಾನ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಶಂಕರ್ ರೆಡ್ಡಿ, ಲೋಕಸಭಾ ಚುನಾವಣೆಗಾಗಿ (LS Polls) ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ತಾನು ಕೇಳಿದ್ದು ನಿಜವಾದರೂ ಅದು ಸಿಗುವ ಲಕ್ಷಣ ಕಾಣುತ್ತಿಲ್ಲ ಎನ್ನುತ್ತಾರೆ. ರಾಜ್ಯದ ನಾಯಕರು ತಮ್ಮ ಪರವಾಗಿ ಮಾತಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ರೆಡ್ಡಿ, ಸಿದ್ದರಾಮಯ್ಯ ಬದಲಾಗಿದ್ದಾರೆ, ಈಗ ಅವರು 2013ರಲ್ಲಿದ್ದಂತೆ ಇಲ್ಲ, ಸಾಕಷ್ಟು ಬದಲಾವಣೆಯಾಗಿದೆ. ಪರಿಸ್ಥಿತಿಯ ಕೈಗೊಂಬೆ ಆಗಿರಲೂಬಹುದು ಎನ್ನುತ್ತಾರೆ. ಶಿವಕುಮಾರ್ ಅವರನ್ನು ನೇರ ಮಾತಿನ ರಾಜಕಾರಣಿ ಎನ್ನುವ ರೆಡ್ಡಿ ತಮಗೆ ಟಿಕೆಟ್ ಸಿಗದಿರಬಹುದಾದ ಕಾರಣಕ್ಕೆ ರಾಜ್ಯ ನಾಯಕರನ್ನು ದೂರುತ್ತಾರೆ. ಒಂದು ಮೂಲದ ಪ್ರಕಾರ ಬಿಜೆಪಿ ಅವರಿಗೆ ಟಿಕೆಟ್ ನೀಡುವ ವದಂತಿ ದಟ್ಟವಾಗುತ್ತಿದೆ, ಹಾಗಾಗಿ ಕಾಂಗ್ರೆಸ್ ತೊರೆಯಲು ಅವರು ವೇದಿಕೆ ಸಿದ್ಧ ಮಾಡುತ್ತಿದ್ದರೆ ಆಶ್ಚರ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ