Karnataka Budget Session; ಗೆದ್ದೇ ಗೆಲ್ತೀವಿ ಅಂತ ಹೇಳಿರಲಿಲ್ಲವೆಂದು ಬೊಮ್ಮಾಯಿ ಎದೆಮುಟ್ಟಿಕೊಂಡು ಹೇಳಲಿ: ಸಿದ್ದರಾಮಯ್ಯ

Karnataka Budget Session; ಗೆದ್ದೇ ಗೆಲ್ತೀವಿ ಅಂತ ಹೇಳಿರಲಿಲ್ಲವೆಂದು ಬೊಮ್ಮಾಯಿ ಎದೆಮುಟ್ಟಿಕೊಂಡು ಹೇಳಲಿ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 20, 2024 | 12:16 PM

ಹಾಗಾದರೆ ಬೊಮ್ಮಾಯಿ ಅವರು ಎದೆಮುಟ್ಟಿಕೊಂಡು ಹೇಳಲಿ, ಚುನಾವಣೆ ಸಂದರ್ಭದಲ್ಲಿ ಅವರು ಏನೆಲ್ಲ ಮಾತಾಡಿದರು, ತಾಕತ್ತಿದ್ದರೆ, ದಮ್ಮಿದ್ರೆ ನಮ್ಮನ್ನು ಸೋಲಿಸಲಿ, ಬಿಜೆಪಿ ಗೆದ್ದೇ ಗೆಲ್ಲುತ್ತದೆ, ನಾವು ಪುನಃ ಅಧಿಕಾರಕ್ಕೆ ಬರ್ತೀವಿ ಅಂತ ಹೇಳುತ್ತಿದ್ದರಲ್ಲ, ಅದೆಲ್ಲ ಮರೆತು ಹೋಯಿತೆ? ಎಂದು ಸಿದ್ದರಾಮಯ್ಯ ಕೇಳುತ್ತಾರೆ.

ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನ ಕಾರ್ಯಕಲಾಪ ಆರಂಭವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಟ್ಯಾಕಿಂಗ್ ಮೂಡ್ ನಲ್ಲಿ ಫೀಲ್ಡಿಗಿಳಿದರು. ಬಸವರಾಜ ಬೊಮ್ಮಾಯಿ (Basavaraj Bommai) ಮುಖ್ಯಮಂತ್ರಿಯಾಗಿದ್ದಾಗ ಏನೂ ಸಾಧನೆಯಾಗದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು ಎಂದು ಸಿದ್ದರಾಮಯ್ಯ ಹೇಳಿದಾಗ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಎದ್ದು ನಿಂತು, ಹಾಗೇನೂ ಇಲ್ಲ, ಬಜೆಪಿ ಸೋತಿದ್ದಕ್ಕೆ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಕಾರಣರಲ್ಲ, ಕಾಂಗ್ರೆಸ್ ಪಕ್ಷ ಮಾಡಿಕೊಂಡ ಹೊಂದಾಣಿಕೆಗಳು ಕಾರಣ ಅನ್ನುತ್ತಾರೆ. ಅದಕ್ಕೆ ಸಿದ್ದರಾಮಯ್ಯ, ಹಾಗಾದರೆ ಬೊಮ್ಮಾಯಿ ಅವರು ಎದೆಮುಟ್ಟಿಕೊಂಡು ಹೇಳಲಿ, ಚುನಾವಣೆ ಸಂದರ್ಭದಲ್ಲಿ ಅವರು ಏನೆಲ್ಲ ಮಾತಾಡಿದರು, ತಾಕತ್ತಿದ್ದರೆ, ದಮ್ಮಿದ್ರೆ ನಮ್ಮನ್ನು ಸೋಲಿಸಲಿ, ಬಿಜೆಪಿ ಗೆದ್ದೇ ಗೆಲ್ಲುತ್ತದೆ, ನಾವು ಪುನಃ ಅಧಿಕಾರಕ್ಕೆ ಬರ್ತೀವಿ ಅಂತ ಹೇಳುತ್ತಿದ್ದರಲ್ಲ, ಅದೆಲ್ಲ ಮರೆತು ಹೋಯಿತೆ? ಅನ್ನುತ್ತಾರೆ. ಯತ್ನಾಳ್ ಪುನಃ ಏನನ್ನೋ ಹೇಳಲು ಎದ್ದಾಗ ಸಿದ್ದರಾಮಯ್ಯ, ರೀ ಯತ್ನಾಳ್ ಸುಮ್ನೆ ಕೂತ್ಕೊಳ್ಳಿ, ನೀವು ಸದನದ ಹಿರಿಯ ಸದಸ್ಯ, ನಾನು ಗಂಟಲು ಸೋಂಕಿನಿಂದ ಬಳಲುತ್ತಿದ್ದೇನೆ, ಹೆಚ್ಚು ಮಾತಾಡಲಾಗಲ್ಲ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ