Karnataka Budget Session: ಬಸನಗೌಡ ಯತ್ನಾಳ್ರ ಯಾವ ಮಾತಿಗೆ ಸಿದ್ದರಾಮಯ್ಯ ಸದನದಲ್ಲಿ ಗಹಗಹಿಸಿ ನಕ್ಕರು ಗೊತ್ತಾ?
ನನ್ನ ಬಗ್ಗೆ ಯತ್ನಾಳ್ ಯಾವಾಗಲೂ ಒಳ್ಳೆಯ ಮಾತುಗಳನ್ನಾಡುತ್ತಾರೆ ಅದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದಾಗ ಕೂಡಲೇ ಎದ್ದು ನಿಲ್ಲುವ ಯತ್ನಾಳ್ ಲೋಕಸಭಾ ಚುನಾವಣೆಯ ಬಳಿಕ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಿ ಅಂತ ಗ್ಯಾರಂಟಿ ಏನು ಎನ್ನುತ್ತಾರೆ.
ಬೆಂಗಳೂರು: ವಿಧಾನ ಸಭಾ ಬಜೆಟ್ ಅಧಿವೇಶನದ (Assembly budget session) ಕಾರ್ಯಕಲಾಪಗಳಲ್ಲಿ ಇಂದು ಸಿದ್ದರಾಮಯ್ಯ (Siddaramaiah) ಮಾತಾಡುವಾಗ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪದೇಪದೆ ಎದ್ದುನಿಂತು ಅಡ್ಡಿಪಡಿಸಿದ್ದು ಮುಖ್ಯಮಂತ್ರಿಯವರ ಜೊತೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಕೋಪ ತರಿಸಿತು. ಮೊದಲಿಗೆ ಅವರು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಈ ಸರ್ಕಾರ ಧೊಪ್ಪಂತ ಕುಸಿದುಬೀಳುತ್ತದೆ ಅಂತ ಹೇಳುತ್ತಾ ಧೊಪ್ಪಂತ ತಮ್ಮ ಆಸನದಲ್ಲಿ ಕೂರುತ್ತಾರೆ. ಅವರ ಮಾತಿಗೆ ಹಿಂದಿನ ಖ್ಯಾತ ನಟ ವಜ್ರಮುನಿಯವರಂತೆ ಗಹಗಹಿಸಿ ನಗುವ ಸಿದ್ದರಾಮಯ್ಯ, ನನ್ನ ಬಗ್ಗೆ ಯತ್ನಾಳ್ ಯಾವಾಗಲೂ ಒಳ್ಳೆಯ ಮಾತುಗಳನ್ನಾಡುತ್ತಾರೆ ಅದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಅನ್ನುತ್ತಾರೆ. ಕೂಡಲೇ ಎದ್ದು ನಿಲ್ಲುವ ಯತ್ನಾಳ್ ಲೋಕಸಭಾ ಚುನಾವಣೆಯ ಬಳಿಕ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಿ ಅಂತ ಗ್ಯಾರಂಟಿ ಏನು ಎನ್ನುತ್ತಾರೆ.
ಸಿದ್ದರಾಮಯ್ಯ ನೆರವಿಗೆ ಧಾವಿಸುವ ಸಚಿವ ಪ್ರಿಯಾಂಕ್ ಖರ್ಗೆ, ಲೋಕಸಭಾ ಚುನಾವಣೆಯ ನಂತರ ಸಂಪೂರ್ಣವಾಗು ಬದಲಾಗುತ್ತದೆ ಅಂತ ನೀವೇ ಹೇಳಿದ್ದೀರಿ, ನಿಮ್ಮ ಮಾತೇ ಗ್ಯಾರಂಟಿ ಎನ್ನುತ್ತಾರೆ. ಯತ್ನಾಳ್ ಪುನಃ ಎದ್ದು ನಿಂತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶದಿಂದ ಭ್ರಷ್ಟಾಚಾರ, ವಂಶವಾದ ಎಲ್ಲವನ್ನೂ ನಿರ್ಮೂಲ ಮಾಡುತ್ತಾರೆ ಅನ್ನುತ್ತಾರೆ. ಆಗ ಸ್ಪೀಕರ್ ಖಾದರ್, ಯತ್ನಾಳ್ ಅವರೇ, ಮುಖ್ಯಮಂತ್ರಿಯವರಿಗೆ ಉತ್ತರ ನೀಡಲು ಬಿಡಿ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ