ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಗದರಿದರು
ಪೊಲೀಸರು ಬಲವಂತದಿಂದ ಹಿಂದೆ ತಳ್ಳಲು ಶುರುಮಾಡಿದಾಗ ಕೊಂಚ ಮೆತ್ತಗಾದ ಪ್ರತಿಭಟನಾಕಾರರು, ಘೋಷಣೆ ಕೂಗದೆ ಶಾಂತಿಯುತವಾಗಿ ಪ್ರದರ್ಶನ ನಡೆಸುತ್ತೇವೆ ಅಂತ ಹೇಳಿದರು. ಅದಕ್ಕೆ ಅವಕಾಶ ನೀಡಿದ ಮಂಗಳೂರು ಪೊಲೀಸರು, ಒಂದೇ ಒಂದು ಮಾತು ಹೊರಬಿದ್ದರೆ ಒಯ್ದು ಜೈಲಿಗೆ ಹಾಕುತ್ತೇವೆ ಅಂತ ಎಚ್ಚರಿಸಿದರು.
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನಗರದಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರುನಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಏರ್ಪೋರ್ಟ್ ಹೊರಗಡೆ ಕೆಲ ಬಿಜೆಪಿ ಕಾರ್ಯಕರ್ತರು (BJP workers) ಅವರ ಕಾರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಜಮಾಯಿಸಿದ್ದರು. ಗಣ್ಯರನ್ನು ಹೊತ್ತ ಕಾರು ರಸ್ತೆಯಲ್ಲಿ ಕಾಣುವ ಮೊದಲು ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಲಾರಂಭಿಸಿದರು. ಸಿದ್ದರಾಮಯ್ಯ ಹಿಂದೂ ವಿರೋಧಿ, ವಾಪಸ್ಸು ಹೋಗಿ ಅಂತ ಅವರು ಘೋಷನೆಗನ್ನು ಕೂಗುತ್ತಿದ್ದಾಗ, ಪೊಲೀಸರು ಧಾವಿಸಿ ಬಂದು ಅವರನ್ನು ಚದುರಿಸುವ ಪ್ರಯತ್ನ ಮಾಡಿದರು. ಆದರೆ, ಕಾರ್ಯಕರ್ತರು ಅಲ್ಲಿಂದ ಹೋಗಲು ತಯಾರಿರಲಿಲ್ಲ. ಪೊಲೀಸರು ಬಲವಂತದಿಂದ ಹಿಂದೆ ತಳ್ಳಲು ಶುರುಮಾಡಿದಾಗ ಕೊಂಚ ಮೆತ್ತಗಾದ ಪ್ರತಿಭಟನಾಕಾರರು, ಘೋಷಣೆ ಕೂಗದೆ ಶಾಂತಿಯುತವಾಗಿ ಪ್ರದರ್ಶನ ನಡೆಸುತ್ತೇವೆ ಅಂತ ಹೇಳಿದರು. ಅದಕ್ಕೆ ಅವಕಾಶ ನೀಡಿದ ಮಂಗಳೂರು ಪೊಲೀಸರು, ಒಂದೇ ಒಂದು ಮಾತು ಹೊರಬಿದ್ದರೆ ಒಯ್ದು ಜೈಲಿಗೆ ಹಾಕುತ್ತೇವೆ ಅಂತ ಎಚ್ಚರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ