ತಾವು ಬಂದೊಡನೆ ಸುದ್ದಿಗೋಷ್ಟಿ ನಿಲ್ಲಿಸಿ ಎದ್ದುನಿಂತ ಸಚಿವ ಮಹದೇವಪ್ಪರನ್ನು ಸಿಎಂ ಸಿದ್ದರಾಮಯ್ಯ ನಯವಾಗಿ ಗದರಿದರು
ವಿಶ್ವಸಂಸ್ಥೆ ಭಾರತದ ಯಾವುದೇ ನಾಯಕ ಜನ್ಮ ವಾರ್ಷಿಕೋತ್ಸವ ಆಚರಿಸಿಲ್ಲ. ಆದರೆ ಡಾ ಬಿಅರ್ ಅಂಬೇಡ್ಕರ್ ಅವರ 125 ಜನ್ಮ ವಾರ್ಷಿಕೋತ್ಸವನ್ನು ಆಚರಿಸಿದೆ ಮತ್ತು ಆ ದಿನವನ್ನು ವರ್ಲ್ಡ್ ನಾಲೇಜ್ ಡೇ ಅಂತ ಕರೆದಿದೆ ಎಂದು ಹೇಳಿದ ಮಹಾದೇವಪ್ಪ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಸಮಾನತೆ ಹೋಗಲಾಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅಂಬೇಡ್ಕರ್ ಹೇಳಿದ ಮಾತನ್ನು ಅವರು ಪುನರುಚ್ಛರಿಸಿದರು.
ಬೆಂಗಳೂರು: ನಗರದಲ್ಲಿಂದು ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ 24 ಕಾರ್ಯಕ್ರಮದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತಾಡುತ್ತಿದ್ದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ (HC Mahadevappa), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಲ್ಲಿಗೆ ಆಗಮಿಸಿದಾಗ, ತಮ್ಮ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಎದ್ದುನಿಂತರಲ್ಲದೆ ತಮ್ಮ ಸೀಟನ್ನು ಸಿಎಂಗೆ ಬಿಟ್ಟುಕೊಡಲು ಮುಂದಾದರು. ಆದರೆ, ಸಿದ್ದರಾಮಯ್ಯ, ನೀನು ಸುದ್ದಿಗೋಷ್ಟಿ ನಡೆಸ್ತಾ ಇದೀಯಾ ಮುಂದುವರಿಸು ಅನ್ನುತ್ತಾರೆ. ಆದರೂ ಮಹದೇವಪ್ಪ ಮುಖ್ಯಮಂತ್ರಿಯವರ ಕೈಹಿಡಿದು ಕುರ್ಚಿಯಲ್ಲಿ ಕೂರಿಸುವ ಪ್ರಯತ್ನ ಮಾಡುತ್ತಾರೆ. ಅವರನ್ನು ಸಲುಗೆಯಿಂದ ಗದರುವ ಸಿದ್ದರಾಮಯ್ಯ ಪಕ್ಕದ ಕುರ್ಚಿಯಲ್ಲಿ ಕೂರುತ್ತಾರೆ. ಅವರು ಆಗಮಿಸುವ ಮಾತಾಡುತ್ತಿದ್ದ ಮಹದೇವಪ್ಪ, ವಿಶ್ವಸಂಸ್ಥೆ ಭಾರತದ ಯಾವುದೇ ನಾಯಕ ಜನ್ಮ ವಾರ್ಷಿಕೋತ್ಸವ ಆಚರಿಸಿಲ್ಲ. ಆದರೆ ಡಾ ಬಿಅರ್ ಅಂಬೇಡ್ಕರ್ ಅವರ 125 ಜನ್ಮ ವಾರ್ಷಿಕೋತ್ಸವನ್ನು ಆಚರಿಸಿದೆ ಮತ್ತು ಆ ದಿನವನ್ನು ವರ್ಲ್ಡ್ ನಾಲೇಜ್ ಡೇ ಅಂತ ಕರೆದಿದೆ ಎಂದು ಹೇಳಿದ್ದರು. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಸಮಾನತೆ ಹೋಗಲಾಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅಂಬೇಡ್ಕರ್ ಹೇಳಿದ ಮಾತನ್ನು ಅವರು ಪುನರುಚ್ಛರಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ