ಗದಗ: ಟಿವಿ9 ವರದಿ ಬಳಿಕ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದ ಅಂಗವಾಡಿ ಚಿತ್ರಣವೇ ಚೇಂಜ್

ಗದಗ ನಗರದ ಗಂಗಾಪೂರ ಪೇಟೆಯ ಅಂಗನವಾಡಿ‌ ಕೇಂದ್ರ 178ರಲ್ಲಿಇದನ್ನು ಸರಿಯಾಗಿ ನಿರ್ವಹಣೆ ಮಾಡದೆ, ಕೊಳೆತ ಮೊಟ್ಟೆ, ಬೂಸ್ಟ್ ಹಿಡಿದ ಶೇಂಗಾ ಚಿಕ್ಕಿಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಟಿವಿ9 ವರದಿ ಪ್ರಕಟಿಸಿತ್ತು. ಇದರ ಫಲಶ್ರುತಿಯಾಗಿ ಅಂಗನವಾಡಿ ಕೇಂದ್ರದ ಚಿತ್ರವಣವೇ ಬದಲಾಗಿದೆ. ಅಲ್ಲದೆ, ನ್ಯಾಯಾಧೀಶರು ಕೂಡ ಭೇಟಿ ನೀಡಿದ್ದಾರೆ.

ಗದಗ: ಟಿವಿ9 ವರದಿ ಬಳಿಕ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದ ಅಂಗವಾಡಿ ಚಿತ್ರಣವೇ ಚೇಂಜ್
ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದ ಅಂಗವಾಡಿಯಲ್ಲಿ ಎಲ್ಲವೂ ಸ್ವಚ್ಛ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Feb 17, 2024 | 1:20 PM

ಗದಗ, ಫೆ.17: ನಗರದ (Gadag) ಗಂಗಾಪೂರ ಪೇಟೆಯ ಅಂಗನವಾಡಿ‌ (Anganawadi) ಕೇಂದ್ರ 178ರಲ್ಲಿಇದನ್ನು ಸರಿಯಾಗಿ ನಿರ್ವಹಣೆ ಮಾಡದೆ, ಕೊಳೆತ ಮೊಟ್ಟೆ, ಬೂಸ್ಟ್ ಹಿಡಿದ ಶೇಂಗಾ ಚಿಕ್ಕಿಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಟಿವಿ9 ವರದಿ ಪ್ರಕಟಿಸಿತ್ತು. ಇದರ ಫಲಶ್ರುತಿಯಾಗಿ ಅಂಗನವಾಡಿ ಕೇಂದ್ರದ ಚಿತ್ರವಣವೇ ಬದಲಾಗಿದೆ. ಅಲ್ಲದೆ, ನ್ಯಾಯಾಧೀಶರು ಕೂಡ ಭೇಟಿ ನೀಡಿದ್ದಾರೆ.

ಅಂಗನವಾಡಿ ಕೇಂದ್ರ ನಿನ್ನೆ ಗಬ್ಬು ವಾಸನೆ, ಅವ್ಯವಸ್ಥೆಯಿಂದ ಕೂಡಿತ್ತು. ಈ ಬಗ್ಗೆ ಟಿವಿ9 ವರದಿ ಪ್ರಕಟಿಸಿದ ನಂತರ ಎಚ್ಚೆತ್ತ ಅಧಿಕಾರಿಗಳು ಇಂದು ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸಿದ್ದಾರೆ. ಲೈಟಿಂಗ್ ವ್ಯವಸ್ಥೆಯನ್ನೂ ಮಾಡಿದ್ದಾರೆ. ನಿನ್ನೆ ಕಳಪೆಯಾಗಿದ್ದ ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಹೊಸ ಶಿಕ್ಷಕಿ ಮಂಜುಳಾ ಬೆಟಗೇರಿ ಎಂಬವರನ್ನು ನೇಮಕ ಮಾಡಲಾಗಿದೆ.

ಮಕ್ಕಳಿಗೆ ಆಟ, ಪಾಠ, ಶುಚಿಯಾದ ಅಡುಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದ್ದು, ಇಂತಹ ಬದಲಾವಣೆಗೆ ಕಾರಣವಾಗಿರುವ ಟಿವಿ9ಗೆ ಮಕ್ಕಳ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ, ಅಂಗನವಾಡಿ ಕೇಂದ್ರಕ್ಕೆ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿ ಸೂಚನೆ ನೀಡಿದರು.

ಇದನ್ನೂ ಓದಿ: ಬಳ್ಳಾರಿ: ಸಿರುಗುಪ್ಪ ಹಾಸ್ಟೆಲ್ ಅಡುಗೆ ಸರಿಯಿಲ್ಲ ಎಂದು ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ವಾರ್ಡನ್​​ ಹಲ್ಲೆ

ಅಂಗನವಾಡಿ ಮಕ್ಕಳ ಜೀವದ ಜೊತೆ‌ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಕಲ್ಯಾಣ ಇಲಾಖೆ ಚೆಲ್ಲಾಟವಾಡುತ್ತಿದೆ. ಕಳಪೆ ಆಹಾರ ಪೂರೈಕೆ ಮಾಡಿರುವ ಪ್ರಕರಣ ಗಂಗಾಪೂರ ಪೇಟೆಯ ಅಂಗನವಾಡಿ‌ ಕೇಂದ್ರ 178ರಲ್ಲಿ ಬೆಳಕಿಗೆ ಬಂದಿತ್ತು. ಕೊಳೆತ ಮೊಟ್ಟೆ, ಬೂಸ್ಟ್ ಹಿಡಿದ ಶೇಂಗಾ ಚಿಕ್ಕಿ ಹಾಗೂ ತರಕಾರಿ ಸೇರಿದಂತೆ ಆಹಾರ ಧಾನ್ಯಗಳಲ್ಲಿ ನುಸಿಗಳು ಕಂಡು ಬರುತ್ತಿದ್ದವು. ಅದನ್ನೇ ಮಕ್ಕಳಿಗೆ ನೀಡುತ್ತಿರುವ ಹಿನ್ನಲೆ ರೊಚ್ವಿಗೆದ್ದ ಪಾಲಕರು, ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉಪನಿರ್ದೇಶಕ ಶೆಟ್ಟೆಪ್ಪನವರ​ನ್ನು ಪಾಲಕರು ಹಿಗ್ಗಾಮುಗ್ಗಾ ತರಾಟೆಗೆ ತಹೆದುಕೊಂಡಿದ್ದರು. ಅಲ್ಲದೆ, ಇಲಿಗಳು ಕಚ್ಚಿರುವ ತರಕಾರಿಗಳನ್ನು ಅಧಿಕಾರಿಗಳ ಎದುರೇ ಸುರಿದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧ ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ