Haveri: ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಹಾವೇರಿಯ ನಾಗೇಂದ್ರಮಟ್ಟಿಯಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿ ಸರಣಿ ಕಳ್ಳತನಗಳು ನಡೆದಿವೆ. ಏಳಕ್ಕೂ ಅಧಿಕ ಮನೆಗಳಲ್ಲಿ ಚಿನ್ನಾಭರಣ ಹಾಗೂ ನಗದು ಕಳವಾಗಿವೆ. ಕಳ್ಳರು ಮನೆಯೊಳಗೆ ನುಗ್ಗಿ, ಚಹಾ ಸೇವಿಸಿ ಪರಾರಿಯಾಗುವಷ್ಟು ಧೈರ್ಯ ತೋರಿದ್ದಾರೆ. ಪೊಲೀಸ್ ಗಸ್ತು ಕೊರತೆ ಮತ್ತು ಹಿಂದಿನ ದೂರುಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ, ಡಿಸೆಂಬರ್ 23: ನಾಗೇಂದ್ರಮಟ್ಟಿಯಲ್ಲಿ ಮನೆಗಳ ಸರಣಿ ಕಳ್ಳತನ ನಡೆದಿದ್ದು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳರು ಕೈಚಳಕ ತೋರಿದ್ದಾರೆ. 7ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ ನಡೆದಿದ್ದು, ನಗದು ಮತ್ತು ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಜೊತೆಗೆ ಚಳಿಯ ವಾತಾವರಣ ಹಿನ್ನೆಲೆ ಕಳವು ಮಾಡಿರುವ ಮನೆಯಲ್ಲೇ ಚಹಾ ಮಾಡಿಕೊಂಡು ಸೇವಿಸಿ ಹೋಗಿದ್ದಾರೆ. ಕಳ್ಳರ ಕೃತ್ಯಕ್ಕೆ ನಾಗೇಂದ್ರಮಟ್ಟಿ ಜನ ಕಂಗಾಲಾಗಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಾವೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
