ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಆಘಾತ, ಪಕ್ಷದ ಮಾಜಿ ಶಾಸಕ ಎಂಸಿ ಅಶ್ವಥ್ ಕಾಂಗ್ರೆಸ್ ತೆಕ್ಕೆಗೆ!

|

Updated on: Sep 30, 2023 | 6:59 PM

ಜೆಡಿಎಸ್ ಅಗ್ರ ನಾಯಕರು ಪಕ್ಷದ ದ್ಯೇಯವಾಗಿದ್ದ ಜಾತ್ಯಾತೀತ ಅಂಶವನ್ನು ಗಾಳಿಗೆ ತೂರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತೀವ್ರ ನಿರಾಶರಾಗಿರುವ ಅಶ್ವಥ್ ಮತ್ತು ಅವರ ಸಂಗಡಿಗರಾದ ಕರಿಯಪ್ಪ, ಜಬಿ, ಜಿಯಾ, ಮುಕ್ರಮ್ ಮೊದಲಾದವರು ಗಾಂಧಿ ಜಯಂತಿಯಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿರುವರೆಂದು ಸುರೇಶ್ ಹೇಳಿದರು.

ರಾಮನಗರ: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಗೂಗ್ಲಿ ಎಸೆದಂತೆ ಸಂಭ್ರಮಿಸುತ್ತಿರುವಾಗಲೇ ಅವರ ಪಕ್ಷದ ಮುಖಂಡರು ರಿವರ್ಸ್ ಸ್ವಿಂಗ್ ಗಳನ್ನು ಎಸೆದು ಅವರನ್ನು ಕಕ್ಕಾಬಿಕ್ಕಿಯಾಗಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಮ್ಮನ್ನು ಕತ್ತಲೆಯಲ್ಲಿಟ್ಟು ಮೈತ್ರಿ ಮಾಡಿಕೊಳ್ಳಲಾಗಿದೆ ಅಂತ ಹೇಳಿದ್ದಾರೆ. ಹಲವಾರು ಭಾಗಗಳಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ ಇಲ್ಲವೇ ಸೇರುವ ನಿರ್ಧಾರ ಮಾಡಿದ್ದಾರೆ. ಇಂದು ರಾಮನಗರದ ಚನ್ನಪಟ್ಟಣದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸ್ಥಳೀಯ ಸಂಸದ ಡಿಕೆ ಸುರೇಶ್ (DK Suresh), ಚೆನ್ನಪಟ್ಟಣದ ಮಾಜಿ ಜೆಡಿಎಸ್ ಶಾಸಕ ಎಂ ಸಿ ಅಶ್ವಥ್ (MC Ashwath) ಕಾಂಗ್ರೆಸ್ ಸೇರುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಜೆಡಿಎಸ್ ಅಗ್ರ ನಾಯಕರು ಪಕ್ಷದ ದ್ಯೇಯವಾಗಿದ್ದ ಜಾತ್ಯಾತೀತ ಅಂಶವನ್ನು ಗಾಳಿಗೆ ತೂರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತೀವ್ರ ನಿರಾಶರಾಗಿರುವ ಅಶ್ವಥ್ ಮತ್ತು ಅವರ ಸಂಗಡಿಗರಾದ ಕರಿಯಪ್ಪ, ಜಬಿ, ಜಿಯಾ, ಮುಕ್ರಮ್ ಮೊದಲಾದವರು ಗಾಂಧಿ ಜಯಂತಿಯಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿರುವರೆಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ