ಸುಪ್ರೀಂ ಕೋರ್ಟ್​​ನಲ್ಲೂ ಕರ್ನಾಟಕಕ್ಕೆ ಹಿನ್ನಡೆ, ಸಿದ್ದರಾಮಯ್ಯ ಮುಖದಲ್ಲಿ ಮಡುಗಟ್ಟಿದ ಹತಾಶೆ!

|

Updated on: Sep 21, 2023 | 6:43 PM

ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಷೆಯ ಪ್ರತಿರೂಪವಾಗಿದ್ದರು. ಮಾಧ್ಯಮ ಪ್ರತಿನಿಧಿಗಳು ಅವರನ್ನು ಸುತ್ತುವರಿದು ಪ್ರತಿಕ್ರಿಯೆ ಕೇಳಿದಾಗ ಒಬ್ಬ ಸೋತ ಸೈನಿಕನ ಹಾಗೆ ಕಂಡ ಸಿದ್ದರಾಮಯ್ಯ ನನ್ ಪಾಡಿಗೆ ನನ್ನ ಬಿಡ್ರಯ್ಯಾ ಅಂತ ಕ್ಷೀಣವಾದ ಧ್ವನಿಯಲ್ಲಿ ಹೇಳಿದರು. ಅವರ ದೃಷ್ಟಿಯಲ್ಲಿ ಶೂನ್ಯತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು.

ದೆಹಲಿ: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಪದೇಪದೆ ಹಿನ್ನಡೆಯಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ನೀಡಿದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಿದ ಮನವಿಯ (appeal) ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಾಧಿಕಾರ ನೀಡಿರುವ ಅದೇಶದಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಕರ್ನಾಟಕದ ಶೋಚನೀಯ ಸ್ಥಿತಿಯನ್ನು ನ್ಯಾಯಾಲಯಕ್ಲೆ ಮನವರಿಕೆ ಮಾಡಲು ಸರ್ಕಾರ ಮತ್ತು ಅದರ ಲೀಗಲ್ ತಂಡ ಕೆಟ್ಟದ್ದಾಗಿ ವಿಫಲವಾಗಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹತಾಷೆಯ ಪ್ರತಿರೂಪವಾಗಿದ್ದರು. ಮಾಧ್ಯಮ ಪ್ರತಿನಿಧಿಗಳು ಅವರನ್ನು ಸುತ್ತುವರಿದು ಪ್ರತಿಕ್ರಿಯೆ ಕೇಳಿದಾಗ ಒಬ್ಬ ಸೋತ ಸೈನಿಕನ ಹಾಗೆ ಕಂಡ ಸಿದ್ದರಾಮಯ್ಯ ನನ್ ಪಾಡಿಗೆ ನನ್ನ ಬಿಡ್ರಯ್ಯಾ ಅಂತ ಕ್ಷೀಣವಾದ ಧ್ವನಿಯಲ್ಲಿ ಹೇಳಿದರು. ಅವರ ದೃಷ್ಟಿಯಲ್ಲಿ ಶೂನ್ಯತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ