ನಂದಿಧ್ವಜ ಮುರಿತು, ಮಾವುತನ ಪತ್ನಿ ಸಾವು, ಅಂಬಾರಿ ತಾಲೀಮಿನಲ್ಲಿ ಮಹೇಂದ್ರ ಕೈಕೊಟ್ಟ: ದಸರಾದಲ್ಲಿ ಯಾಕಿಷ್ಟು ಅಭಾಸಗಳು?
ದಸರಾ ಉದ್ಘಾಟನೆಗೆ ಮುನ್ನವೇ ನಂದಿ ಧ್ವಜ ಕಂಬ ಮುರಿದುಬಿದ್ದಿತ್ತು. ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ ಏಕಾಏಕಿ ನಂದಿ ಧ್ವಜದ ಕಂಬ ಮುರಿಯಿತು. ಇನ್ನು ದಸರಾ ಸಂದರ್ಭದಲ್ಲೇ ಮಾವುತನ ಪತ್ನಿ ಸಾವನ್ನಪ್ಪಿರುವುದು ಹಾಗೇ ಅಂಬಾರಿ ಹೊರುವ ತಾಲೀಮಿನಲ್ಲಿ ಮಹೇಂದ್ರ ಆನೆ ಕೈಕೊಟ್ಟಿದೆ. ಹೀಗೆ ಸಾಲು ಸಾಲು ಅಭಾಸಗಳು ಏಕೆ ಆದವು ಎನ್ನುವ ಚರ್ಚೆಗಳು ಶುರುವಾಗಿವೆ.
ಮೈಸೂರು, (ಅಕ್ಟೋಬರ್ 22): ಈ ಬಾರಿಯ ಮೈಸೂರು ದಸರಾ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. 11 ದಿನಗಳ ನವರಾತ್ರಿ ಉತ್ಸುವ ಯಶಸ್ಸು ಕಂಡಿದೆ. ಅದಲ್ಲೂ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತ ಪ್ರಶಾಂತ ಎಲ್ಲವನ್ನ ಶಾಂತ ಚಿತ್ತದಿಂದ ನಿರ್ವಹಿಸಿದ್ದಾನೆ. ಇನ್ನು ಈ ಬಾರಿಯ ದಸರಾದಲ್ಲಿ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಕಂಬಳ, ಸೇನಾ ಬ್ಯಾಂಡ್‌ಗಳು, ಸ್ತಬ್ಧಚಿತ್ರಗಳ ಶೋ, ಡ್ರೋನ್ ಶೋ ಮತ್ತು ನಟ-ನಟಿಯರ ಮೆರವಣಿಗೆಗಳು ಜನರನ್ನು ಆಕರ್ಷಿಸಿದವು. ಆದ್ರೆ, ದಸರಾ ಆರಂಭದಲ್ಲೇ ಕೆಲ ಅವಘಡಗಳು ಸಂಭವಿಸಿವೆ.
ಹೌದು.. ದಸರಾ ಉದ್ಘಾಟನೆಗೆ ಮುನ್ನವೇ ನಂದಿ ಧ್ವಜ ಕಂಬ ಮುರಿದುಬಿದ್ದಿತ್ತು. ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ ಏಕಾಏಕಿ ನಂದಿ ಧ್ವಜದ ಕಂಬ ಮುರಿಯಿತು. ಇನ್ನು ದಸರಾ ಸಂದರ್ಭದಲ್ಲೇ ಮಾವುತನ ಪತ್ನಿ ಸಾವನ್ನಪ್ಪಿರುವುದು ಹಾಗೇ ಅಂಬಾರಿ ಹೊರುವ ತಾಲೀಮಿನಲ್ಲಿ ಮಹೇಂದ್ರ ಆನೆ ಕೈಕೊಟ್ಟಿದೆ. ಹೀಗೆ ಸಾಲು ಸಾಲು ಅಭಾಸಗಳು ಏಕೆ ಆದವು ಎನ್ನುವ ಚರ್ಚೆಗಳು ಶುರುವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
