ಬಾಗಲಕೋಟೆ: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ, ಜಿಲ್ಲೆಯ ಹಲವಾರು ಕಿರು ಸೇತುವೆಗಳು ಜಲಾವೃತ

|

Updated on: Jul 23, 2024 | 1:38 PM

ಭಾರೀ ಪ್ರಮಾಣದಲ್ಲಿ ಮಳೆ ಸುರಿದಿರುವ ಕಾರಣ ಬೂದಿಹಾಳ ಕಿರುಸೇತುವೆಯಲ್ಲದೆ ಇನ್ನೂ 6-7 ಸೇತುವೆಗಳು ಜಲಾವೃತಗೊಂಡು ವಾಹನ ಮತ್ತು ಜನ ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮಳೆ ಸುರಿಯುವ ನಿರೀಕ್ಷೆ ಇರುವುದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಲಿವೆ.

ಬಾಗಲಕೋಟೆ: ದಕ್ಷಿಣ ಕರ್ನಾಟಕದ ಹಾಗೆ ಉತ್ತರ ಕರ್ನಾಟಕದ ನದಿಗಳು ಸಹ ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ರಬಕವಿ-ಬನಹಟ್ಟಿ, ಮುಧೋಳ ಮತ್ತು ಬೀಳಗಿ ಮೊದಲಾದ ಊರುಗಳ ಮೂಲಕ ಹಾದು ಹೋಗುವ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಈ ಭಾಗದಲ್ಲಿನ ಬಹಳಷ್ಟು ಕಿರುಸೇತುವೆಗಳು ಜಲಾವೃತಗೊಂಡಿವೆ. ನಮ್ಮ ಬಾಗಲಕೋಟೆ ವರದಿಗಾರ ತೆರಳಿ ವರದಿ ಮಾಡುತ್ತಿರುವ ಬೂದಿಹಾಳ ಹೆಸರಿನ ಗ್ರಾಮದಲ್ಲಿರುವ ಕಿರುಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ಸೇತುವೆಯು ಸುತ್ತಮುತ್ತಲಿನ 7-8 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಜನ ಬಾಗಲಕೋಟೆ ತಲುಪಬೇಕಾದರೆ ಸೇತುವೆ ಮೂಲಕ ಹೆದ್ದಾರಿಗೆ ಬರಬೇಕು. ಅದರೆ ಜನ ಈಗ 20 ಕಿಮೀಗಳಷ್ಟು ದೂರವನ್ನು ಸುತ್ತಿಹಾಕಿಕೊಂಡು ಹೋಗಬೇಕಿದೆ ಎಂದು ವರದಿಗಾರ ಹೇಳುತ್ತಾರೆ. ಘಟಪ್ರಭಾ ನದಿಗೆ 22,000 ಕ್ಯೂಸೆಕ್ಸ್ ನೀರು ಹರಿದು ಬಂದಿರುವುದರಿಂದ ನೀರು ಹೊಲ ಗದ್ದೆಗಳಿಗೂ ಹರಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Rains: ಕರ್ನಾಟಕದಾದ್ಯಂತ ನಾಳೆಯಿಂದ ಕೊಂಚ ಕಡಿಮೆಯಾಗಲಿದೆ ಮಳೆಯ ಅಬ್ಬರ