ಒಂದೇ ಹಗರಣವನ್ನು 3 ಸಂಸ್ಥೆಗಳು ತನಿಖೆ ನಡೆಸುತ್ತಿರುವುದು ಮೊದಲ ಬಾರಿ ನೋಡಿದ್ದೇನೆ: ಸಿದ್ದರಾಮಯ್ಯ
ಕರ್ನಾಟಕ ಸರ್ಕಾರ ರಚಿಸಿರುವ ಎಸ್ಐಟಿ ₹34 ಕೋಟಿ ನಗದು ಹಣವನ್ನು ರಿಕವರಿ ಮಾಡಿದೆ ಮತ್ತು ರತ್ನಾಕರ್ ಹೆಸರಿನ ಬ್ಯಾಂಕ್ ನಲ್ಲಿದ್ದ 46 ಕೋಟಿ ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಡಿ ಮತ್ತು ಸಿಬಿಐ ವಿರುದ್ಧ ಸರ್ಕಾರ ಈಗಾಗಲೇ ಎಫ್ಐಅರ್ ದಾಖಲಿಸಿದೆ.
ಬೆಂಗಳೂರು: ಕೇಂದ್ರೀಯ ತನಿಖಾ ದಳಗಳಾಗಿರುವ ಸಿಬಿಐ ಮತ್ತು ಸಿಬಿಐ ವಾಲ್ಮೀಕಿ ನಿಗಮ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಬಿ ನಾಗೇಂದ್ರರನ್ನು ಪ್ರಕರಣದಲ್ಲಿ ಸಿಎಂ ಮತ್ತು ಡಿಸಿಎಂ ಶಾಮೀಲಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಮತ್ತು ಅವರ ಸಚಿವ ಸಂಪುಟ ಸದಸ್ಯರು ಮತ್ತು ಶಾಸಕರು ವಿಧಾನ ಸೌಧದ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಎಸ್ಐಟಿ ಮಾಡುತ್ತಿದ್ದರೂ ಸಿಬಿಐ ಯೂನಿಯನ್ ಬ್ಯಾಂಕ್ ನೀಡಿರುವ ದೂರನಡಿ ಮತ್ತು ಈಡಿ ಸ್ವಯಮಪ್ರೇರಿತವಾಗಿ ತನಿಖೆ ನಡೆಸುತ್ತಿವೆ. ಒಂದೇ ಪ್ರಕರಣವನ್ನು ಮೂರು ಸಂಸ್ಥೆಗಳು ತನಿಖೆ ನಡೆಸುತ್ತಿರುವುದು ಇದೇ ಮೊದಲ ತಾನು ನೋಡುತ್ತಿರೋದು ಎಂದು ಮುಖ್ಯಮಂತ್ರಿ ಹೇಳಿದರು. ವಾಲ್ಮೀಕಿ ಹಗರಣದಲ್ಲಿ ಅವ್ಯವಹಾರ ನಡೆದಿರೋದು ಬಿಜೆಪಿ ಶಾಸಕರು ಹೇಳುತ್ತಿರುವಂತೆ ₹ 187 ಕೋಟಿ ಅಲ್ಲ, ₹ 89.63 ಕೋಟಿ ಹಣದ ದುರುಪಯೋಗ ನಡೆದಿದೆ ಮತ್ತು ಆ ಮೊತ್ತ ತೆಲಂಗಾಣಕ್ಕೆ ಹೋಗಿದೆ. ಆದರೆ ಎಸ್ಐಟಿ ಅಧಿಕಾರಿಗಳು 12 ಜನರನ್ನು ಬಂಧಿಸಿದ್ದಾರೆ ಮತ್ತು ಶೇಕಡ 90 ರಷ್ಟು ಹಣವನ್ನು ರಿಕವರ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣದಲ್ಲಿ ಮಂತ್ರಿ ಪಾತ್ರ ಇರೋದನ್ನು ಒಪ್ಪಿಕೊಂಡು ಸಿಎಂ ದೊಡ್ಡ ಉಪಕಾರ ಮಾಡಿದ್ದಾರೆ: ಅರ್ ಅಶೋಕ