Union budget 2024: ಬಜೆಟ್ ಮಂಡಿಸಲು ಕೈಯಲ್ಲಿ ಕೆಂಪು ಟ್ಯಾಬ್ ಹಿಡಿದು ತಮ್ಮ ಕಚೇರಿಯಿಂದ ಹೊರಬಿದ್ದ ನಿರ್ಮಲಾ ಸೀತಾರಾಮನ್

Union budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಳನೇ ಬಾರಿಗೆ ಕೇಂದ್ರದ ಬಜೆಟ್ ಮಂಡಿಸಲಿದ್ದಾರೆ. ಈ ಸಲದ ಬಜೆಟ್ ನಲ್ಲಿ ಅವರು ಹಳೆಯ ಮತ್ತು ಹೊಸ ತೆರಿಗೆ ವಿಧಾನಗಳ ಮೂಲ ರಿಯಾಯಿತಿಗಳನ್ನು ಹೆಚ್ಚಿಸಿ ಮಧ್ಯಮ ವರ್ಗದ ಕುಟುಂಬಗಳಿಗೆ ಭಾರೀ ನಿರಾಳತೆಯನನ್ನು ಒದಗಿಸುವ ನಿರೀಕ್ಷೆ ಇದೆ.

Union budget 2024: ಬಜೆಟ್ ಮಂಡಿಸಲು ಕೈಯಲ್ಲಿ ಕೆಂಪು ಟ್ಯಾಬ್ ಹಿಡಿದು ತಮ್ಮ ಕಚೇರಿಯಿಂದ ಹೊರಬಿದ್ದ ನಿರ್ಮಲಾ ಸೀತಾರಾಮನ್
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2024 | 10:33 AM

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸಲಿದ್ದಾರೆ. ತಮ್ಮ ಎಂದಿನ ಕೆಂಪು ವರ್ಣದ ಟ್ಯಾಬ್ ಅನ್ನು ಕೈಯಲ್ಲಿ ಹಿಡಿದು ಅವರು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಹಣಕಾಸು ಸಚಿವಾಲಯದಿಂದ ಹೊರ ಬೀಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. 2004-2025 ವಿತ್ತೀಯ ವರ್ಷದ ಕೇಂದ್ರ ಆಯವ್ಯಯ ಪತ್ರ ಮಂಡಿಸಲು ಅವರು ಶ್ವೇತವರ್ಣದ ಸೀರೆ ಉಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಅನ್ನು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಸರ್ಕಾರದ ಮುಂದಿನ ಐದು ವರ್ಷ ಅಧಿಕಾರಾವಧಿಯಲ್ಲಿ ನಡೆಯಲಿರುವ ಅಭಿವೃದ್ಧಿ ಕೆಲಸಗಳ ದಿಕ್ಸೂಚಿ ಎಂದು ಬಣ್ಣಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  GST Council Meet: ಪೆಟ್ರೋಲ್, ಡೀಸೆಲ್ ಕೂಡ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಾ?; ನಿರ್ಮಲಾ ಸೀತಾರಾಮನ್ ಉತ್ತರ ಇಲ್ಲಿದೆ

Follow us