ವಾಲ್ಮೀಕಿ ನಿಗಮ ಹಗರಣದಲ್ಲಿ ಮಂತ್ರಿ ಪಾತ್ರ ಇರೋದನ್ನು ಒಪ್ಪಿಕೊಂಡು ಸಿಎಂ ದೊಡ್ಡ ಉಪಕಾರ ಮಾಡಿದ್ದಾರೆ: ಅರ್ ಅಶೋಕ
ಹಾಸನ ಜಿಲ್ಲೆಯಲ್ಲೂ ಧಾರಾಕಾವಾಗಿ ಮಳೆ ಸುರಿಯುತ್ತಿರುವ ಕಾರಣ ಸಕಲೇಶಪುರದಲ್ಲಿ ಕೆಲ ಮನೆಗಳು ಕುಸಿದು ಬಿದ್ದು ಜನರ ತೊಂದರೆ ಸಿಲುಕಿದ್ದಾರೆ. ನಾಳೆ ತಾನು ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಅಲ್ಲಿಗೆ ಹೋಗುತ್ತಿರುವುದಾಗಿ ಅಶೋಕ ಹೇಳಿದರು. ಕುಮಾರಸ್ವಾಮಿಯವರು ಇವತ್ತು ಗುಡ್ಡ ಕುಸಿತ ಕಂಡಿರುವ ಶಿರೂರುಗೆ ಭೇಟಿ ನೀಡಿದ್ದಾರೆ.
ಬೆಂಗಳೂರು: ವಿರೋಧ ಪಕ್ದದ ನಾಯಕ ಅರ್ ಅಶೋಕ ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡುವಾಗ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು. ವಾಲ್ಮೀಕಿ ನಿಗಮ ಹಗರಣದಲ್ಲಿ ಯಾವುದೇ ಮಂತ್ರಿಯ ಪಾತ್ರವಿಲ್ಲ ಎಂದು ಮೊದಲು ಹೇಳುತ್ತಿದ್ದ ಮುಖ್ಯಮಂತ್ರಿಯವರು ನಿನ್ನೆ ತಾವು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾತ್ರವಿದೆ ಅನ್ನೋದನ್ನು ಅಂಗೀಕರಿಸಿ ರಾಜ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ಹೇಳಿದರು. ಸದನದಲ್ಲಿ ತಾನು ಪದೇಪದೆ ಆ ಸಂಗತಿಯನ್ನು ಪ್ರಸ್ತಾಪಿದ್ದಕ್ಕೆ ಮತ್ತು ಅವರ ಮೇಲೆ ಒತ್ತಡ ಹಾಕಿದ್ದಕ್ಕೆ ಅವರು ಮಂತ್ರಿಯ ಪಾತ್ರವನ್ನು ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಅಶೋಕ ಹೇಳಿದರು. ಸದನದಲ್ಲಿ ಅವರು ನಿಷ್ಪಕ್ಷವಾದ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿ ಕೊನೆಯಲ್ಲಿ ಕೇವಲ ಅಧಿಕಾರಿಗಳನನ್ನು ದೂಷಿಸುವ ಪ್ರಯತ್ನ ಮಾಡಿದರು ಎಂದು ಅಶೋಕ ಹೇಳಿದರು. ವಾಲ್ಮೀಕಿ ನಿಗಮ ಹಗರಣ ಕುತ್ತಿಗೆಗೆ ಬಂದಾಗ ಸರ್ಕಾರ ನಡೆಸುತ್ತಿರುವವರಿಗೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತು ಗುಡ್ಡ ಕುಸಿತದ ಪ್ರಕರಣಗಳು ನೆನಪಾಗಿವೆ, ಮಳೆ ಎರಡು ವಾರದಿಂದ ಆಗುತ್ತಿದ್ದರೂ ಗಮನಕ್ಕೆ ಬಂದಿಲ್ಲ ಅಂತಾದ್ರೆ ಅವರೆಲ್ಲ ಕತ್ತೆ ಕಾಯ್ತಾ ಇದ್ರಾ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೂಟಿ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರದ ಕೆಲಸ: ಆರ್ ಅಶೋಕ್ ವಾಗ್ದಾಳಿ